November 11, 2024
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು – ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಕಲ್ಲಡ್ಕ : ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ  ಹುಲಿಗಳು ಸಮಾಜದಲ್ಲಿರುವ ಕೆಟ್ಟದ್ದನ್ನು ವಿರೋಧಿಸಿ ಗರ್ಜಿಸುವ ಹುಲಿಗಳಾಗಬೇಕು, ಆ  ಮೂಲಕ ಹಿಂದೂ ಧರ್ಮದ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯ ಆಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಅವರು ಕಲ್ಲಡ್ಕ ಕೆ.ಟಿ. ಹೋಟೆಲ್ ಲಕ್ಷ್ಮಿ ಗಣೇಶ್ ಇದರ ಸಹಕಾರದೊಂದಿಗೆ ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ 6ನೇ ವರ್ಷದ ಸಂಭ್ರಮಾಚರಣೆಯ ಸಾಂಪ್ರದಾಯಿಕ ದಸರಾ ಹುಲಿಗಳು- 2024ರ ಹುಲಿವೇಶಕ್ಕೆ “ಊದು ಹಾಕುವ” ಕಾರ್ಯಕ್ರಮದ ನಿಮಿತ್ತ ಕಲ್ಲಡ್ಕ ಶ್ರೀರಾಮ ಮಂದಿರದ ಪ್ರತಾಪ್ಗಡ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕದ ಪ್ರಮುಖ ಕಲ್ಲಡ್ಕ ಲಕ್ಷ್ಮೀ ಗಣೇಶ್ ಕೆ.ಟಿ. ಹೋಟೆಲ್ ಮಾಲಕ ರಾಜೇಂದ್ರ ಹೊಳ್ಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಹುಲಿ ವೇಷದಾರಿ ಡೊoಬಯ್ಯ ಟೈಲರ್ ಕಲ್ಲಡ್ಕ, ಹುಲಿ ವೇಷದಲ್ಲಿ ಅಕ್ಕಿಮುಡಿ ಹಾರಿಸುವ ಪುರುಷೋತ್ತಮ ಮಾಣಿಮಜಲು, ಚಿತ್ರ ಕಲಾವಿದ ಯೋಗೀಶ್ ಆಚಾರ್ಯ ಇವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಕಲ್ಲಡ್ಕ ವ್ಯಾಪ್ತಿಯಲ್ಲಿ ವಿವಿದ ರೀತಿಯ ಸಮಾಜ ಸೇವ ಕಾರ್ಯಕ್ರಮವನ್ನು ನಡೆಸುತ್ತಿರುವ ಸುಮಾರು 44 ಸಂಘ ಸಂಸ್ಥೆಗಳನ್ನು ಗುರುತಿಸಿ ನೆನಪಿನ ಸ್ಮರಣೆಕ್ಕೆ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಪುತ್ತೂರು ಪಿಲಿಗೊಬ್ಬ ರುವಾರಿ ಸಹಜ್ ರೈ ಬಳಜ್ಜ, ವಿಭಾಗ ಸಂಚಾಲಕ ಪುನೀತ್ ಅತ್ತಾವರ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ನಿತ್ಯಾನಂದ ಆಶ್ರಮ ಕಾಂಜೇಗಾಡ್ನ ಗಣಪತಿ ಸ್ವಾಮಿ, ಹಿಂದೂ ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ, ರಂಜನ್ ಬಲ್ಯಾಯ, ಮೊದಲಾದವರು ಉಪಸ್ಥಿತರಿದ್ದರು.

ಸಬಾ ಕಾರ್ಯಕ್ರಮದ ಮೊದಲು ಮೈಸೂರು ರಾಮಚಂದ್ರ ಆಚಾರ್ಯರಿಂದ ನಡೆದ ಸುಧೀರ್ಘ ಮೂರು ಗಂಟೆಯ ದಾಸವಾಣಿ ಕಾರ್ಯಕ್ರಮ ಹಾಗೂ ಸ್ಥಳೀಯ ಕುಣಿತ ಭಜನೆ ತಂಡಗಳ ಭಜನಾ ಕುಣಿತ ಎಲ್ಲರ ಮನಸೋರೆಗೊಂಡಿತು. ಒಂದರಿಂದ ಒಂಬತ್ತು ವರ್ಷದ ಮಕ್ಕಳಿಗೆ ಬಾಲ ಭೋಜನ ಎಂಬ ವಿಶೇಷ ಕಾರ್ಯಕ್ರಮ ಜರಗಿತು. ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕದ ಮುಖ್ಯಸ್ಥ ನಾಗರಾಜ್ ಕಲ್ಲಡ್ಕ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಪ್ರಜಿತ್ ಕೆಂಪುಗುಡ್ಡೆ ವಂದಿಸಿದರು. ಗೋಪಾಲ್ ಬಲ್ಯಾಯ ಕಲ್ಲಡ್ಕ ಹಾಗೂ ಉದಯ ಕೆಲಿಂಜ ಕಾರ್ಯಕ್ರಮ ನಿರೂಪಿಸಿದರು.

You may also like

News

ಕರಾವಳಿ ಸುದ್ದಿ ನೂತನ ವೆಬ್ ಸೈಟ್ ಉದ್ಘಾಟನೆ

  ಬಂಟ್ವಾಳ : ಕರಾವಳಿ ಸುದ್ದಿ ವಾರಪತ್ರಿಕೆಯ ನೂತನ ವೆಬ್ ಸೈಟ್ www.karavalisuddi.com ಸಪ್ಟೆಂಬರ್ 8ರ ಭಾನುವಾರ ಲೋಕಾರ್ಪಣೆಗೊಂಡಿತು. ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು
News

ಸೂರಿಕುಮೇರು ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಮೇರಿ ಮಾತೆಯ ವಾರ್ಷಿಕ ಹಬ್ಬ ಮೊಂತಿ ಹಬ್ಬವನ್ನು ಇಂದು ಸಪ್ಟಂಬರ್ 8ರಂದು ವಿಜೃಂಭಣೆ, ಸಂಬ್ರಮ, ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

You cannot copy content of this page