ನಾರಾಯಣಗುರುಗಳ ಸಂದೇಶ ಯುವವಾಹಿನಿಗೆ ದಾರಿದೀಪ – ರಾಜೇಶ್ ಸುವರ್ಣ

ಬಂಟ್ವಾಳ : 36 ವರ್ಷಗಳ ಸುಭದ್ರ ಇತಿಹಾಸ ಹೊಂದಿರುವ ಯುವವಾಹಿನಿ ಸಂಸ್ಥೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶ ದಾರಿದೀಪವಾಗಿದೆ, ಗುರುತತ್ವವಾಹಿನಿ ಮೂಲಕ ನಿರಂತರವಾಗಿ ನಡೆಯುವ ಭಜನಾ ಸಂಕೀರ್ತನೆಯು ಯುವವಾಹಿನಿಯ ಯಶಸ್ಸಿನ ಮೆಟ್ಟಿಲಾಗಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದರು.
ಅವರು ಅಕ್ಟೋಬರ್ 10ರಂದು ಗುರುವಾರ ಬಂಟ್ವಾಳ ತಾಲೂಕಿನ ಪಲ್ಲಮಜಲು ರಾಜೇಂದ್ರ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 15ರಲ್ಲಿ ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಸದಸ್ಯರಾದ, ಯತೀಶ್ ಬೊಳ್ಳಾಯಿ, ಹರೀಶ್ ಅಜೆಕಲ, ಯಶೋಧರ ಕಡಂಬಲ್ಕೆ, ನಯನಾ ಪಚ್ಚಿನಡ್ಕ, ಮಲ್ಲಿಕಾ ಪಚ್ಚಿನಡ್ಕ,ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.