October 18, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನವರಾತ್ರಿ ಸಂಧರ್ಭ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಯಿಲೆ ಇಂದ ಬಳಲುತಿರುವ ಮಗುವಿಗೆ ಹಸ್ತಾಂತರ

ಬಂಟ್ವಾಳ : ಬಂಟ್ವಾಳ ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ರಾಯಪ್ಪಕೋಡಿ ಕಲ್ಲಡ್ಕ ವತಿಯಿಂದ 2 ನೇ ವರ್ಷದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭ ದಲ್ಲಿ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಹಿಲೆ ಇಂದ ಬಳಲುತಿರುವ ಪುತ್ತೂರಿನ ರಂಜನ್ ಎನ್ನುವವರ 3 ವರ್ಷದ ಮಗು ಅಗಸ್ತ್ಯ ಕೃಷ್ಣನಿಗೆ ರೂಪಾಯಿ 37000/- ನೀಡಲಾಯಿತು.

ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, ಮಿಥುನ್, ಯಶ್ವಿನ್ ಕಲ್ಲಡ್ಕ, ಪ್ರವೀಣ್ ರಾಯಪ್ಪಕೋಡಿ, ಜಗದೀಶ್ ರಾಯಪ್ಪಕೋಡಿ, ಸೋಹನ್ ಕಲ್ಲಡ್ಕ ಭಾಗವಹಿಸಿದ್ದರು.

ಕಳೆದ ವರ್ಷ್ ಕೂಡ ಪ್ರಥಮ ಕಾರ್ಯವಾಗಿ ರೂಪಾಯಿ 23000/- ನಿಧಿ ಸಂಗ್ರಹ ಮಾಡಿ ಕಾವ್ಯವೆಂಬ 11 ವರ್ಷದ ಬಾಲಕಿಗೆ ನೀಡಲಾಗಿತು. ಈ ಸಮಾಜ ಸೇವಾ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

You may also like

News

Bindu Jewellery Marks 40 Years with Grand Showroom Inauguration in Mangaluru

Bindu Jewellery, a name synonymous with trust and timeless craftsmanship, celebrates 40 years of excellence with the grand opening of
News

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರ  ಬಹು ಅಗತ್ಯ – ಇನ್ಸ್‌ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ

ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಇಂದು ಅಕ್ಟೋಬರ್ 17ರಂದು ಶುಕ್ರವಾರ ನಡೆದ ಪಾಲಕ ಹಾಗೂ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ

You cannot copy content of this page