ಧಾರ್ಮಿಕ ಪ್ರವಚನ ನೀಡಲು ಅಬುಧಾಬಿಯ ಉಸ್ತಾದ್ ಸಿಂಸಾರುಲ್ ಹಖ್ ಹುದವಿ ಗೋಳ್ತಮಜಲಿಗೆ
ಬಂಟ್ವಾಳ : ಕಲ್ಲಡ್ಕ ಸಮೀಪದ ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಇದರ ಆಶ್ರಯದಲ್ಲಿ ಮೂರು ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಕ್ಟೋಬರ್ 24, 25 ಮತ್ತು 26 ರಂದು ಮಸೀದಿ ವಠಾರದ ಮರ್ಹೂಮ್ ಅಬ್ದುಲ್ ಖಾದರ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ.
ಅಕ್ಟೋಬರ್ 24 ರಂದು ಅಬ್ದುಸ್ಸಮದ್ ಪುಕೊಟೂರು, ಅಕ್ಟೋಬರ್ 25 ರಂದು ಅಶ್ಫಾಕ್ ಫೈಝಿ ನಂದಾವರ ಹಾಗೂ ಅಕ್ಟೋಬರ್ 26 ರಂದು ಉಸ್ತಾದ್ ಸಿಂಸಾರುಲ್ ಹಖ್ ಹುದವಿ ಅಬುಧಾಬಿ ಧಾರ್ಮಿಕ ಪ್ರವಚನಗೈಯಲಿದ್ದು ಹಲವಾರು ಧಾರ್ಮಿಕ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.