ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿದ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ

ಬಂಟ್ವಾಳ : ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿ ಯಶ್ವಿತ್ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿದ್ದು,
ಶಮ್ ರಿನ್ : 400ಮೀ ಓಟ – ದ್ವಿತೀಯ, 200ಮೀ ಓಟ – ಪ್ರಥಮ, 600ಮೀ ಓಟ –ದ್ವಿತೀಯ
ಯಶ್ವಿತ್ : 100ಮೀ ಓಟ – ಪ್ರಥಮ, 200ಮೀ ಓಟ – ದ್ವಿತೀಯ, 400ಮೀ ಓಟ – ದ್ವಿತೀಯ
ಮುಹಮ್ಮದ್ ಹುಸೈನ್ ನಿಫಾಲ್ : ಚಕ್ರ ಎಸೆತ – ದ್ವಿತೀಯ
ಚರಣ್ : ಉದ್ದ ಜಿಗಿತ – ತೃತೀಯ
ಬಾಲಕಿಯರ ರಿಲೇ(4X100) : ಪ್ರಥಮ
ಬಾಲಕರ ರಿಲೇ (4X100) :ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಹಾಗೂ ಮಂಗಳೂರಿನ ಮಂಗಳ ಕ್ರೀಡಾಂಗನಲ್ಲಿ ನಂಬರ್ 4 ರಂದು ನಡೆಯುವ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕರು ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಶಾಲಾ ಅಸೆಂಬ್ಲಿ ಸಮಯದಲ್ಲಿ ಅಭಿನಂದಿಸಲಾಯಿತು.