ಇನ್ನೂ ಮುಂದೆ ರಸ್ತೆ ಬದಿ ಹೋಟೆಲ್‌ಗಳಿಗೂ ಆಹಾರ ಸುರಕ್ಷತೆ ಪ್ರಮಾಣ ಪತ್ರ ಕಡ್ಡಾಯ..!
ಬೆಂಗಳೂರು : ಆಹಾರ ಕಲಬೆರಕೆ ತಡೆಗೆ, ಹೋಟೆಲ್‌ಗಳಲ್ಲಿ ಗುಣಮಟ್ಟ ಆಹಾರ ಲಭ್ಯತೆ ಉದ್ದೇಶದಿಂದ ಆರೋಗ್ಯ ಇಲಾಖೆ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ರಾಜ್ಯದ ಎಲ್ಲ ಬಗೆಯ ಹೋಟೆಲ್‌ಗಳು, ಬೇಕರಿಗಳು, ಆನ್‌ಲೈನ್‌ನಲ್ಲಿ ಪುಡ್ ಡೆಲಿವರಿ ಮಾಡುವ ಕಂಪನಿಗಳು ಹಾಗೂ ಪಿಜ್ಜಾ, ರ್ಬಗರ್ ಮಾರಾಟ ಮಾಡುವ ಹೋಟೆಲ್‌ಗಳು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ ಪತ್ರ (ಪೋಸ್ಟಾಕ್) ಪಡೆಯುವುದು ಕಡ್ಡಾಯಗೊಳಿಸಿದೆ. ಹೋಟೆಲ್‌ಗಳು, ಬೇಕರಿಗಳು, ಆನ್‌ಲೈನ್‌ನಲ್ಲಿ ಆಹಾರ ಸರಬರಾಜು ಮಾಡುವ ಸಂಸ್ಥೆಗಳು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ ಪತ್ರ ಪಡೆಯುವುದು ಕಡ್ಡಾಯವಾಗಿದೆ.
ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಆಹಾರ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. ಅಂದಾಜು 14 ಲಕ್ಷ ಆಹಾರ ಉದ್ದಿಮೆಗಳು ಪ್ರಾಧಿಕಾರದಲ್ಲಿ ನೊಂದಾಣಿ ಮಾಡಿಕೊಂಡಿವೆ. ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯ. ಆದರೆ, ಬಹುತೇಕ ಹೋಟೆಲ್, ರಸ್ತೆಬದಿಯಲ್ಲಿ ಮಾರಾಟ ಮಾಡುವವರು ಆಹಾರ, ಸಿಹಿ, ಖಾರ ತಿನಿಸು, ಕರಿದ ಪದಾರ್ಥಗಳಲ್ಲಿ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶ ಬಳಸಿ ಕಲಬೆರಕೆ ಆಹಾರ ಮಾರಾಟ ಮಾಡುತ್ತಿದ್ದಾರೆ.
ಕಲಬೆರಕೆ ಆಹಾರ ಮತ್ತು ಗಂಭೀರ ರೋಗಗಳ ಪ್ರಮಾಣ ತಡೆಯುವ ಉದ್ದೇಶದಿಂದ ಪ್ರಾಧಿಕಾರವೂ, ಕಾನೂನಿನ ಅನ್ವಯ ಪ್ರತಿ ಆಹಾರ ಉದ್ಯಮಗಳು ಪ್ರಮಾಣೀಕರಣ ಪತ್ರ ಪಡೆಯವಂತೆ ನಿಯಮ ಜಾರಿಗೆ ತಂದಿದೆ. ಕಾಯ್ದೆ ಅನ್ವಯ 2006ರಿಂದ ಎಲ್ಲ ಆಹಾರ ಉದ್ದಿಮೆದಾರರು ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ರಸ್ತೆ ಬದಿ ಹೋಟೆಲ್ ನಡೆಸುತ್ತಿರುವವರು ಸೇರಿ ಎಲ್ಲ ಬಗೆಯ ಹೋಟೆಲ್ ಮಾಲೀಕರು ಕಡ್ಡಾಯವಾಗಿ ಆಹಾರ ವ್ಯಾಪಾರ ನಿರ್ವಾಹಕರಿಗೆ ಪ್ರಮಾಣಪತ್ರ ಪಡೆಯಬೇಕು. ಪ್ರತಿ ಆಹಾರ ವ್ಯಾಪಾರದ ಕಾರ್ಯಾಚರಣಾ ಆವರಣದ ಆಹಾರ ವಿತರಣೆಯಲ್ಲಿ ಎಲ್ಲ ಅಥವಾ ಕನಿಷ್ಠ 5 ಆಹಾರ ನಿರ್ವಾಹಕರು ಕಡ್ಡಾಯವಾಗಿ ತರಬೇತಿ ಪಡೆಯಬೇಕು.
ಪರವಾನಗಿ ಅಥವಾ ನೋಂದಣಿ ಸಂದರ್ಭದಲ್ಲಿ ಪ್ರಮಾಣ ಪತ್ರವನ್ನು ಅಗತ್ಯ ದಾಖಲೆ ಎಂದು ಪರಿಗಣಿಸಲಾಗಿದೆ. ಪ್ರಮಾಣ ಪತ್ರ ನೀಡುವ ಮುನ್ನ ನಿಗದಿತ ಶುಲ್ಕ ಕಟ್ಟಿಸಿಕೊಂಡು ಕೇಂದ್ರ ಸರ್ಕಾರದ ನೋಂದಾಯಿತ ತರಬೇತಿದಾರರಿಂದ ಒಂದು ದಿನ ಗುಣಟಮಟ್ಟ ಆಹಾರ ಕುರಿತು ಸೂಕ್ತ ತರಬೇತಿ ನಡೆಸಲಾಗುತ್ತದೆ. ಇದಾದ ಬಳಿಕ ಪರೀಕ್ಷೆ ನಡೆಸಿ ವಾರದೊಳಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಇಲಾಖೆಗಳ ಆಯುಕ್ತರು, ಆಹಾರ ಸುರತಾಧಿಕಾರಿಗಳು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರಮಾಣೀಕರಣ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ.