ಅಲ್ ಮುರ್ಶಿದ್ ಅಕಾಡೆಮಿಯಲ್ಲಿ ಬೃಹತ್ ಸಮ್ಮೇಳನ

ಜಲಾಲಿಯ್ಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್ ಕಾರ್ಯಕ್ರಮ – ನೌಫಲ್ ಸಖಾಫಿ ಕಳಸರಿಂದ ಪ್ರಭಾಷಣ
ಮಾಣಿ : ಇಲ್ಲಿನ ಪಾಟ್ರಕೋಡಿ ಸಮೀಪದ ಕೆದಿಲ ಕುದುಂಬ್ಲಾಡಿ ಅಲ್ ಮುರ್ಶಿದ್ ಅಕಾಡೆಮಿಯಲ್ಲಿ 6ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಜಲಾಲಿಯ್ಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್ ಕಾರ್ಯಕ್ರಮ ಇದೇ ಗುರುವಾರ ಜನವರಿ 16ರಂದು ಮಗ್ರಿಬ್ ಬಳಿಕ ನಡೆಯಲಿದೆ. ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸರವರ ಪ್ರಭಾಷಣವಿರುವ ವೇದಿಕೆಯಲ್ಲಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಸ್ಸಯ್ಯಿದ್ ಅಬ್ದುಲ್ ಲತೀಫ್ ಬಾಅಲವಿ ತಂಙಳ್, ಇಬ್ರಾಹಿಂ ಹಂಝ ಹಾದಿ ತಂಙಳ್ ಪಾಟ್ರಕೋಡಿ, ಸಯ್ಯಿದ್ ಸಾಬಿತ್ ತಂಙಳ್ ಮುಈನೀ ಸಖಾಫಿ, ಇಕ್ಬಾಲ್ ಮದನಿ ಕುಕ್ಕೋಟು, ರಫೀಕ್ ಸಖಾಫಿ ಮಂಜನಾಡಿ, ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಡಂಬಾರ್, ಖಾಸಿಂ ಲತೀಫಿ ಕೊಳ್ಳರಕೋಡಿ, ಮುಹಮ್ಮದ್ ಅಲೀ ಸಅದಿ, ಅಬ್ದುಲ್ ರಝಾಕ್ ಮದನಿ ನಿಟ್ಟೆ, ಸ್ವಾದಿಖ್ ಸಖಾಫಿ ಪೇರಾಲ್, ಕಾಸಿಂ ಹಾಜಿ ಪರ್ಲೊಟ್ಟು, ರಫೀಕ್ ಮದನಿ ಪಾಟ್ರಕೋಡಿ, ಹೈದರ್ ಸಖಾಫಿ ಶೇರಾ, ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಸಲೀಂ ಮದನಿ ಕುತ್ತಾರ್, ಯೂಸುಫ್ ಹಾಜಿ ಸೂರಿಕುಮೇರು, ಅಬ್ಬಾಸ್ ನೇರಳಕಟ್ಟೆ, ಅಶ್ರಫ್ ಪೆರ್ನೆ ಸಹಿತ ಹಲವಾರು ಉಲಮಾ ಉಮರಾ, ರಾಜಕೀಯ ನಾಯಕರುಗಳು ಭಾಗವಹಿಸಲಿರುವರು ಎಂದು ಸಂಸ್ಥೆಯ ಸಾರಥಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದರು.