November 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರಧಾನಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ – ಕಾಂಗ್ರೆಸ್ ಮುಖಂಡನ ವಿರುದ್ದ ದೂರು

ಭಾರತದಲ್ಲಿ ಸಂವಿಧಾನಿಕವಾಗಿ ಅಧಿಕಾರದಲ್ಲಿರುವ ಪ್ರಧಾನಿ ಬಗ್ಗೆ ಅಣಕಿಸುವ ಅನೇಕ ಪೋಸ್ಟರ್ ಗಳನ್ನು ಹಾಕಿದ, ಪುತ್ತೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಮಾಜಿ ಶಾಸಕ ಸಂಜೀವ ಮಟಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಒಳಗೊಂಡ ಬಿಜೆಪಿ ನಿಯೋಗ ಪೊಲೀಸರಿಗೆ ದೂರು ನೀಡಿದೆ.

ದೇಶದ ಪ್ರಧಾನಿಯವರನ್ನು ಅಣಕಿಸುವ ದೇಶದ ಸಹೋದರತೆಗೆ, ಸಾರ್ವಭೌಮತೆಗೆ ಕಾರ್ಕೋಟಕ ವಿಷ” “ಇವರು ವಿಶ್ವ ಗುರು ಅಲ್ಲಾ, ವಿಷ ಗುರು” ಎಂಬಿತ್ಯಾದಿ ಹಾಗೂ ಅನೇಕ ಪೋಸ್ಟರ್ ಗಳನ್ನು ಅವರು ತಮ್ಮ “Amala Ramachandra” ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ಇದು ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಿಯವರಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಸಂವಿಧಾನಿಕವಾಗಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೀಳು ಭಾವನೆಯನ್ನು ಹಬ್ಬಿಸುವುದು, ಪ್ರಚಾರ ಮಾಡುವುದು ದೇಶದ ಭದ್ರತೆಯ ಬಗ್ಗೆ ಕೀಳು ಭಾವನೆಯನ್ನು ಬಿಂಬಿಸುವುದು ದೇಶ ದ್ರೋಹದ ಕೆಲಸವಾಗಿರುತ್ತದೆ.

ಇದನ್ನು ನೋಡಿದ ಭಾರತೀಯ ಜನತಾ ಪಾರ್ಟಿಯ ಅನೇಕ ಕಾರ್ಯಕರ್ತರಿಗೆ ಬೇಸರ ಉಂಟಾಗಿರುತ್ತದೆ. ಅಲ್ಲದೆ ದೇಶದ ಪ್ರಧಾನಿಗೆ ಇದು ಅವಮಾನ ಮಾಡಿದ್ದಾಗಿರುತ್ತದೆ ಎಂದು ಹೇಳಲಾಗಿದೆ.

You may also like

News

ಮಹಿಳಾ ವೈಭವ – 2026: ಮಂಗಳೂರಿನಲ್ಲಿ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ

ಮಹಿಳಾ ಸಬಲೀಕರಣಕ್ಕೆ ಸುವರ್ಣ ಅಧ್ಯಾಯ – ಚಂಚಲ ತೇಜೋಮಯ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು 2026ರ ಜನವರಿ 31 ಮತ್ತು ಫೆಬ್ರವರಿ 1ರಂದು ಮಂಗಳೂರಿನ ಪುರಭವನದಲ್ಲಿ
News

2026 ಜನವರಿ 16 ರಿಂದ  25 ವರೆಗೆ ಕಾಜೂರು ಮಖಾಂ ಉರೂಸ್  

ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಇವರಿಂದ ದಿನಾಂಕ ಘೋಷಣೆ ಹಾಗೂ ಪೋಸ್ಟರ್ ಬಿಡುಗಡೆ ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ

You cannot copy content of this page