ಸ್ತ್ರೀ ಸಂಘಟನೆ ತಾಕೊಡೆ ಘಟಕದ ಮುಂದಾಳತ್ವದಲ್ಲಿ ಕೆನರಾ ಕ್ಯಾನ್ಸರ್ ಕೇರ್ ಏಂಜಲ್ ಎಕೌಂಟ್ ಬಗ್ಗೆ ಮಾಹಿತಿ ಶಿಬಿರ
ತಾಕೊಡೆ ಪವಿತ್ರ ಶಿಲುಬೆಯ ದೇವಾಲಯದ ಸಭಾ ಭವನದಲ್ಲಿ ಮೇ 25ರಂದು ಭಾನುವಾರ ಕೆನರಾ ಬ್ಯಾಂಕ್ ವಿದ್ಯಾಗಿರಿ ಶಾಖೆಯ ವತಿಯಿಂದ ಕೆನರಾ ಕ್ಯಾನ್ಸರ್ ಕೇರ್ ಏಂಜಲ್ ಎಕೌಂಟ್ ಹಾಗೂ ಸರಕಾರದಿಂದ ದೊರೆಯುವ ಇತರ ಸೌಲಭ್ಯಗಳ ಕುರಿತು ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು. ಸ್ತ್ರೀ ಸಂಘಟನೆಯ ಸದಸ್ಯರ ಪ್ರಾರ್ಥನಾ ಗೀತೆಯ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ಸರ್ವರನ್ನು ಸ್ತ್ರೀ ಸಂಘಟನೆಯ ಅಧ್ಯಕ್ಷೆ ಐವಿ ಕ್ರಾಸ್ತಾ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯತೆಯನ್ನು ವಹಿಸಿದ ತಾಕೊಡೆ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ರೋಹನ್ ಲೋಬೊ ಹಾಗೂ ಇತರ ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.













ಧರ್ಮಗುರುಗಳು ತಮ್ಮ ಸಂದೇಶದಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕೆನರಾ ಬಜೆಗೋಳಿ ಶಾಖೆಯ ಅಧಿಕಾರಿ ಅನುಷಾ, ಕೆನರಾ ವಿದ್ಯಾಗಿರಿ ಬ್ರಾಂಚ್ ನ ಕಸ್ಟಮರ್ ಸರ್ವಿಸ್ ಅಸೋಸಿಏಟ್ ವಿಲ್ಸನ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಫ್ರಾನ್ಸಿಸ್ ಮೆಂಡೋನ್ಸಾ, ಕಾರ್ಯದರ್ಶಿ ಆಲ್ವಿನ್ ಪಿಂಟೊ, 21 ಆಯೋಗದ ಸಂಯೋಜಕ ಪಾವ್ಲ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೆಯ ಜಾಗರಣ್ ಪತ್ರಿಕೆಯ ಪ್ರತಿನಿಧಿ ಸಬಿತಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ-ಕಾರ್ಯದರ್ಶಿ ಶೆರ್ರಿ ನಜ್ರೆತ್ ವಂದಿಸಿದರು.







ಸಭಾ ಕಾರ್ಯಕ್ರಮದ ನಂತರ ಕೆನರಾ ವಿದ್ಯಾಗಿರಿ ಶಾಖೆಯ ಪ್ರಬಂಧಕ ಸವಿತಾ, CSA ವಿಲ್ಸನ್ ಪಿಂಟೊ, ಬಜೆಗೋಳಿ ಶಾಖೆಯ ಅಧಿಕಾರಿ ಅನುಷಾ ಇವರು ಕೆನರಾ ಕ್ಯಾನ್ಸರ್ ಕೇರ್ ಏಂಜಲ್ ಖಾತೆ ಹಾಗೂ ಸರಕಾರದಿಂದ ಬ್ಯಾಂಕ್‍ನಲ್ಲಿ ದೊರೆಯುವ ಇತರ ಸೌಲಭ್ಯಗಳಾದ
- APY – ಅಟಲ್ ಪೆನ್ಶನ್ ಯೋಜನೆ
- PMJJBY- ಪ್ರಧಾನಮಂತ್ರಿ ಜೀವನ್‍ಜ್ಯೋತಿ ಭಿಮಾ ಯೋಜನೆ
- PMSBY- ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ
- ಸ್ಟೂಡೆಂಟ್ಸ್ ಲೋನ್
ಇವುಗಳ ಬಗ್ಗೆ ಮಾಹಿತಿ ನೀಡಿದರು. ಹಲವಾರು ಸದಸ್ಯರು ಪ್ರಶ್ನೆಗಳನ್ನು ಕೇಳಿ ವಿಷಯಗಳನ್ನು ತಿಳಿದುಕೊಂಡು ಈ ಮಾಹಿತಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.




