May 6, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳ ಪ್ರಕರಣದ SIT ತನಿಖೆಯ ಮಧ್ಯಂತರ ವರದಿಗೆ ಜೈನ ಸಮುದಾಯ ಮುಖಂಡರ ಆಗ್ರಹ

ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ SIT ನಡೆಸುತ್ತಿರುವ ತನಿಖೆಯ ಮಧ್ಯಂತರ ವರದಿಯನ್ನು SIT ಪ್ರಕಟಿಸಬೇಕು ಎಂದು ಜೈನ ಸಮಾಜದ ಮುಖಂಡರು ಆಗ್ರಹಿಸಿದರು.

ಹುಬ್ಬಳ್ಳಿಯ ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಆಗಸ್ಟ್ 10ರಂದು ಭಾನುವಾರ ನಡೆದ ಜೈನ ಸಮಾಜದ ಮುಖಂಡರು, ಜೈನ ಮುನಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಈ ಕುರಿತಂತೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಸನ್ಮಾನ್ಯ ಜಿ. ಪರಮೇಶ್ವರ್ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು. ಪ್ರಕರಣದ ಸಾಕ್ಷಿ ದೂರುದಾರ ಹೇಳಿದ್ದ ಬಹುತೇಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದು ಹೀಗೆಯೇ ಮುಂದುವರಿದರೆ ಮಂಜುನಾಥಸ್ವಾಮಿ ದೇವಸ್ಥಾನವನ್ನು ನೆಲಸಮಗೊಳಿಸುವ ಅಪಾಯವಿದೆ ಎಂದು ಮುಖಂಡರು ಸಭೆಯಲ್ಲಿ ಹೇಳಿದರು.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ ಗಿರೀಶ ಮಟ್ಟೆಣ್ಣವರ್ ಕೂಡಲೇ ಕ್ಷಮೆ ಕೇಳಬೇಕು. ಆತನ ವಿರುದ್ಧ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜೈನ ಸಮಾಜದ ವತಿಯಿಂದ ಪ್ರಕರಣ ದಾಖಲಿಸಲಾಗುವುದು. ಕೂಡಲೇ ಆತನನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.  ಧಾರವಾಡ ಕಲಾಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್ 1ರಂದು ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

You may also like

News

ಸಾಹಿತ್ಯ ಸಂಭ್ರಮ – ಮೇ 10ರಂದು ವಲ್ಲಿ ವಗ್ಗ ಅವರ ‘ವಿಂಚ್ಣಾರ್ ಕಾಣಿಯೊ’ ಕೃತಿ ಲೋಕಾರ್ಪಣೆ

ಕೊಂಕಣಿ ಸಾಹಿತ್ಯ ಲೋಕದ ಹಿರಿಯ ಸಾಹಿತಿ ವಲ್ಲಿ ವಗ್ಗ (ವಲೇರಿಯನ್ ಡಿಸೋಜ) ಅವರ ಬಹುನಿರೀಕ್ಷಿತ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕ ಲೋಕಾರ್ಪಣೆ
News

ಮುಕ್ಕ ಚೇಳ್ಯಾರು ಸಂತ ಜೋಸೆಫ್ ಪ್ರಾರ್ಥನಾ ಮಂದಿರದ ದಶಮಾನೋತ್ಸವ ಹಾಗೂ ವಾರ್ಷಿಕೋತ್ಸವ ಸಂಭ್ರಮ

“ಪ್ರಾರ್ಥನಾ ಮಂದಿರಗಳು ಮನುಷ್ಯರಲ್ಲಿ ಪ್ರೀತಿಯನ್ನು ಬಿತ್ತಬೇಕು” – ಡಾ| ಗಣೇಶ್ ಅಮಿನ್ ಸಂಕಮಾರ್ ಕಥೋಲಿಕ ತೈಲಾಗಾರ ನಿರ್ವಸಿತರ ಅಭಿವೃದ್ಧಿ ಸಮಿತಿ (ರಿ.) ಮುಕ್ಕ ಚೇಳ್ಯಾರು ಇದರ ಆಶ್ರಯದಲ್ಲಿ,

You cannot copy content of this page