SBI ಬ್ಯಾಂಕ್ ದರೋಡೆ – 13 ಲಕ್ಷ ದೋಚಿ ಪರಾರಿ, ಪೊಲೀಸರಿಂದ ಶೋಧ
ಕಾಕನೂರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕಿಗೆ ಸೆಪ್ಟೆಂಬರ್ 3ರಂದು ಸೋಮವಾರ ಮದ್ಯರಾತ್ರಿ ಕನ್ನ ಹಾಕಿದ ದುಷ್ಕರ್ಮಿಗ ಳು ದರೋಡೆ ಮಾಡಿ ಅಂದಾಜು 13 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಗ್ರಾಮದ ಹೊರವಲಯದಲ್ಲಿರುವ SBI ಬ್ಯಾಂಕ್ ಸುತ್ತ ಕಬ್ಬಿನ ಗದ್ದೆ ಇದ್ದು ಯಾವ ಭಯವೂ ಇಲ್ಲದೆ ಕಳ್ಳತನ ಸಲಿಸಾಗಿ ನಡೆದಿದೆ. ಬ್ಯಾಂಕಿನಲ್ಲಿ ಭದ್ರ ತಾ ಸಿಬ್ಬಂದಿ ಇಲ್ಲದ ಕಾರಣವೇ ದರೋಡೆಗೆ ಮತ್ತಷ್ಟು ಅನಕೂಲವಾಗಿದೆ.

ಬ್ಯಾಂಕಿನ ಹಿಂಬಾಗದಿಂದ ಬಂದು ಕನ್ನ ಹಾಕಿದ ಕಳ್ಳರು ತಮ್ಮ ಚಹರೆ ಮರೆಮಾಚಲು ಬ್ಯಾಂಕ್ ಸುತ್ತ ಇರುವ ಸಿಸಿ ಕ್ಯಾಮರಾಗಳಿಗೆ ಬ್ಲಾಕ್ ಪೇಂಟ್ ಸ್ಪ್ರೇ ಮಾಡಿದ್ದಾರೆ. ನಂತರ ಬ್ಯಾಂಕ್ ಹಿಂಬದಿಯಲ್ಲಿರುವ ಶಟರ್ ಲಾಕ್ ಮುರಿದು ಒಳನುಗ್ಗಿದ ಕಳ್ಳರು ಬ್ಯಾಂಕ್ ನಲ್ಲಿರುವ ಎಲ್ಲ ಸಿಸಿ ಟಿವಿಗಳಿಗೆ ಬ್ಲಾಕ್ ಪೇಂಟ್ ಸ್ಪ್ರೇ ಮಾಡಿ. ಸೈರಾನ್ ವಯರ್ ಕಟ್ ಮಾಡಿ ಕಳ್ಳತನಕ್ಕೆ ಕೈ ಹಾಕಿದ್ದಾರೆ. ಬ್ಯಾಂಕ್ ತುಂಬ ಸಂಚರಿಸಿ ಮ್ಯಾನೇಜರ್ ರೂಮ್ ನಲ್ಲಿರುವ ಲಾಕರ್‌ನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ನಂತರ ಸ್ಟ್ರಾಂಗ್ ರೂಮ್ ಗೆ ಕೈ ಹಾಕಿದ್ದಾರೆ. ಅಲ್ಲಿರುವ ಮೂರು ಲಾಕರ್‌ಗಳ ಪೈಕಿ ದುಡ್ಡಿದ್ದ ಒಂದು ಲಾಕರ್ ಕಟ್ ಮಾಡಿ ನಗದು ದೋಚಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಚಿನ್ನ ಇರುವ ಲಾಕರ್ ಮುಟ್ಟದೆ ಸೇಪ್ ಇದ್ದು ದೊಡ್ಡ ದರೋಡೆ ತಪ್ಪಿದಂತಾಗಿದೆ ಎಂದು SP ಸಿದ್ಧಾರ್ಥ್ ಗೋಯಲ್ ಪತ್ರಿಕೆಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ SP ಸಿದ್ಧಾರ್ಥ ಗೋಯಲ್, ಹೆಚ್ಚುವರಿ SP ಮಹಾಂತೇಶ್ವರ ಜಿದ್ದಿ, DYSP ವಿಶ್ವನಾಥರಾವ್ ಕುಲಕಣ ಕಿ., ಸಿಪಿಐ ಕರೆಪ್ಪ ಬನ್ನೆ, ಪಿಎಸ್‌ಐ ಹನಮಂತ ನರಳೆ, ಕ್ರೈಂ ಪಿಎಸ್‌ಐ ವಿಜಯಕುಮಾರ್ ರಾಠೋಡ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿ ಟಿವಿ ಕ್ಯಾಮರಾ ಹಾಗೂ ಇದೆ ಮಾದರಿಯ ಅಪರಾಧಿಗಳಲ್ಲಿ ಭಾಗಿಯಾಗಿರುವ ಪೂರ್ವಾಪರ ಆಧರಿಸಿ ತನಿಖೆ ಆರಂಭಗೊಳಿಸಿದ್ದೇವೆ. ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಮನ್ವಯತೆ ಸಾಧಿಸಿ ತನಿಕೆ ನಡೆಸಲಾಗುತ್ತಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು ಆ ರೋಪಿಗಳ ಪತ್ತೆಗೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಸಾಕ್ಷಾಧಾರಗಳನ್ನು ಆಧರಿಸಿ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತದೆ ಎಂದು SP ಸಿದ್ಧಾರ್ಥ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




