ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರ ಕಲೆ ಕಾರಣಿಕದ ನೆಲೆ – ದಯಾನಂದ ಕತ್ತಲ್ ಸಾರ್
ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾಯಿ ದುರ್ಗಾಮಾತೆಗೆ ಅತ್ಯಂತ ಪ್ರೀತಿಯ ಸೇವೆಯಾಗಿರುವ ಪಿಲಿನಲಿಕೆ ಸೇವೆಯನ್ನು ಹೇಮಂತ್ ಕೆದ್ದೇಲುರವರು ಉತ್ತಮ ರೀತಿಯಲ್ಲಿ ಆಯೋಜಿಸಿದ್ದಾರೆ. ಕಲಾಸೇವೆಯನ್ನು ಅರ್ಪಿಸುವುದಲ್ಲದೆ, ತುಳುನಾಡಿನ ಸಂಸ್ಕೃತಿ ಆಚರಣೆಯನ್ನು ಉಳಿಸಿ, ಬೆಳೆಸಿ, ಹತ್ತಾರು ಜನಕ್ಕೆ ಪರಿಚಯಿಸುವ ಕಾರ್ಯವನ್ನೂ ಮಾಡಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ತುಳು ವಿಧ್ವಾಂಸಾರದ ದಯಾನಂದ ಕತ್ತಲ್ ಸಾರ್ ಹೇಳಿದರು.


ಅವರು ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ಪಿಲಿನಲಿಕೆ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಕಲೆ ಕಾರಣಿಕದ ನೆಲೆಯಾಗಿದ್ದು, ಪುರಾತನ ಕಾಲದಲ್ಲಿ ಈ ಸನ್ನಿಧಿಯಲ್ಲಿ ಹೊರಾಂಗಣ ಮಾತ್ರವಲ್ಲದೆ ಒಳಂಗಾಣದಲ್ಲೂ ರಥೋತ್ಸವ ನಡೆಯುತ್ತಿದ್ದಂತಹ ವೈಭವದ ಸ್ಥಳವಾಗಿತ್ತು. ಈಗಲೂ ಕ್ಷೇತ್ರದಲ್ಲಿ ಸಾಕಷ್ಟು ಕಾರಣಿಕವಿದೆ. ನಂಬಿದವರನ್ನು ದೇವಿ ಕೈಬಿಟ್ಟಿಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ಖ್ಯಾತ ವಕೀಲರಾದ ಬಿ. ಧನಂಜಯ್ ರಾವ್ ಮಾತನಾಡಿ, ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಯದಲ್ಲಿ ಸಹಕರಿಸಿದ ಗ್ರಾಮಸ್ಥರ ಸೇವಾ ಕಾರ್ಯವನ್ನು ಶ್ಲಾಘಿಸಿ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿಯಾಗಲು ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.




