October 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಿಕರ್ನಕಟ್ಟೆಯಲ್ಲಿ ವೋಟ್‌ ಚೋರ್‌ ಗದ್ದಿ-ಚೋಡ್‌ ಸಹಿ ಸಂಗ್ರಹ  ಅಭಿಯಾನ – MLC ಐವನ್‌ ಡಿಸೋಜ

ವೋಟ್‌ ಚೋರ್‌ ಗದ್ದಿ-ಚೋಡ್‌ ಈ ಅಭಿಯಾನ ಇಂದು ಅಕ್ಟೋಬರ್ 15ರಂದು ಬುಧವಾರ ಬಿಕರ್ನಕಟ್ಟೆಯಲ್ಲಿ  ನಡೆಸಲಾಯಿತು. ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ MLC ಐವನ್‌ ಡಿಸೋಜರವರು ಬಿಜೆಪಿ ಸರಕಾರ ಇಂದು ಅಧಿಕಾರಕ್ಕೆ ಬಂದು ಸುಳ್ಳು ಆಶ್ವಾಸನೆ ನೀಡಿ ಜನರ ಮನಸಿನಲ್ಲಿ ವಿಫಲವಾಗಿದ್ದು ಯಾವುದೇ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಜನರು ಅದನ್ನು ತೀವ್ರವಾಗಿ ತಿರಸ್ಕರಿಸುವ ಈ ಸಂದರ್ಭದಲ್ಲಿ ಕಡೆಯದಾಗಿ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸವನ್ನು ಮಾಡಲು ಪ್ರಾರಂಭಿಸಿದೆ. ಇದು ಮಹಾರಾಷ್ಟ ಹಾಗೂ ಬೇರೆ ರಾಜ್ಯಗಳಲ್ಲಿ ಮತಕಳ್ಳತನದ ಮೂಲಕ ಅಧಿಕಾಕ್ಕೆ ಬಂದಂತಹ ಬಿಜೆಪಿ ಇಂದು ಮತ್ತೆ ಬೇರೆ ಬೇರೆ ರಾಜ್ಯಗಳಲ್ಲಿ ಕೈಯಾಡಿಸುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸಹಿಸುವುದಿಲ್ಲ ಎಂದು ಬಿಕರ್ನಕಟ್ಟೆಯಲ್ಲಿ ನಡೆದ ವೋಟ್‌ ಚೋರ್‌ ಗದ್ದಿ-ಚೋಡ್‌ ಈ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರಕಾರ ಪಂಚಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಅರ್ಥಿಕ ಪರಿಸ್ಥಿತಿಯನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸವನ್ನು ಮಾಡಿದೆ. ಅರ್ಥಿಕ ಸಭಲತೆಯನ್ನು ನೀಡಿದೆ. ಅದೇ ರೀತಿ Per capital Income (ತಲಾ ಆದಾಯ)ದಲ್ಲಿ ದೇಶದಲ್ಲಿಯೇ ಕರ್ನಾಟಕ ಸರಕಾರ ಪ್ರಥಮ ಸ್ಥಾನದಲ್ಲಿದೆ. ಹಾಗಾಗಿ ಜನರನ್ನು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ ಮತವನ್ನು ಕಳ್ಳತನ ಮಾಡುವ ಮೂಲಕ ತಂತ್ರಗಾರಿಕೆಯನ್ನು ಮಾಡುತ್ತಿದೆ. ಅದುದರಿಂದ ಕಾಂಗ್ರೆಸ್‌ ಸರಕಾರ ಮತಕಳ್ಳತನಕ್ಕೆ ಅಸ್ಪದ ನೀಡುವುದಿಲ್ಲ ಎಂದು MLC ಐವನ್‌ ಡಿಸೋಜ ತಿಳಿಸಿದರು. ನಿನ್ನೆ ಹಾಗೂ ಇಂದು ನಡೆದ ಅಭಿಯಾನದ ಭಾಗವಾಗಿ ಅವರು ಬಿಕರ್ನಕಟ್ಟೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅದೇ ರೀತಿ ಬೇರೆ ದಿನಗಳಲ್ಲಿ ಸಂಜೆಯ ಹೊತ್ತಿನಲ್ಲಿ ಜನಸಂದಣಿ ಇರುವ ಪ್ರದೇಶದಲ್ಲಿ ಸಹಿ ಅಭಿಯಾನದ ಜೊತೆಗೆ ಬಿಜೆಪಿಯ ವಿರುದ್ದ ಜನಾಂದೋಲನವನ್ನು  ಮಾಡುವುದಾಗಿ ಐವನ್‌ ಡಿಸೋಜ ತಿಳಿಸಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಕಾಶ್‌ ಸಾಲ್ಯಾನ್‌ ರವರು ವಹಿಸಿದ್ದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಜೆ.ಆರ್. ಲೋಬೋರವರು ಮತಗಳ್ಳತನಕ್ಕೆ ಯಾರೂ ಬೆಂಬಲ ಕೊಡಬಾರದು ಮತದಾರರು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ.  ಮತದಾರ ಹಕ್ಕನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ ಮಾತನಾಡಿ ಮತದಾನದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶ್ಲಾಘಿಸಿದರು. ಸಮಾರಂಭದಲ್ಲಿ ನವೀನ್‌ ಡಿಸೋಜ, ಮೀನಾ ಟೆಲ್ಲಿಸ್‌, ಸತೀ಼ಷ್‌ ಪೆಂಗಲ್‌, ಪ್ರೇಮ್‌ ಬಲ್ಲಾಳ್‌ಬಾಗ್‌, ಟಿ.ಕೆ. ಸುಧೀರ್‌, ಆಲ್ಟೇನ್‌ ಡಿಕುನ್ಹಾ, ರಿತೇಶ್‌ ಶಕ್ತಿನಗರ, ಜೇಮ್ಸ್‌ ಪ್ರವೀಣ್‌,  ಮಂಜುಳಾ ನಾಯಕ್‌, ಕ್ರಿಸ್ಟನ್‌, ಆಶಾಲತಾ, ಟಿ.ಸಿ. ಗಣೇಶ್‌, ಸುನೀತ್‌, ಪ್ರಧ್ವಿ ಮುಂತಾದವರು ಉಪಸ್ಥಿತರಿದ್ದರು.

You may also like

News

World Mental Health Day 2025 – Inaugural at Father Muller

The Father Muller Medical College, in collaboration with the District Legal Services Authority, Dakshina Kannada District Administration, Zilla Panchayath, District
News

ಉಡುಪಿಯ ಭ್ರಷ್ಟ RTO ಅಧಿಕಾರಿಯ ಮನೆಯಲ್ಲಿ ಕೋಟ್ಯಾಂತರ ರೂಪಾಯಿ, ನಗದು ಚಿನ್ನ, ಬೆಳ್ಳಿ ಪತ್ತೆ

ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ. ನಾಯಕ್ ರವರ ಕಚೇರಿ, ಮನೆ, ಆಪ್ತರ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಅಕ್ಟೋಬರ್ 14ರಂದು ಮಂಗಳವಾರ ಬೆಳಗ್ಗಿನ

You cannot copy content of this page