ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಫಲ್ಗುಣಿ ಕಟ್ಟಡ ಉದ್ಘಾಟನೆ
ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಫಲ್ಗುಣಿ ಕಟ್ಟಡದ ಉದ್ಘಾಟನೆಯು ವೇಣೂರಿನಲ್ಲಿ ನಡೆಯಿತು. ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿ ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಫಲ್ಗುಣಿ ಸಹಕಾರಿ ಸಂಘವು ರೈತಾಪಿ ವರ್ಗದ ಶ್ರೇಯೋಭಿ ವೃದ್ದಿಗೆ ಸೇವೆ ನೀಡುತ್ತಿದೆ ಎಂದರು.

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಮತ್ತು ಸಹಬಾಳ್ವೆಗೆ ಉದಾಹರಣೆ ಫಲ್ಗುಣಿ ಕಟ್ಟಡ. ಸಹಕಾರಿ ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಂಘದಲ್ಲಿ ಅಳವಡಿಲಾಗಿದೆ ಎಂದರು.



ವೇದಿಕೆಯಲ್ಲಿ ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷ ಹರೀಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಮಂಗಳೂರು ಕೆ.ಎಂ.ಎಫ್. ನಿರ್ದೇಶಕ ಪ್ರಭಾಕರ ಹುಲಿಮೇರು, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ವೇಣೂರು ಎಂ.ಜೆ.ಎಂ. ಖತೀಬರು ಸಯ್ಯಿದ್ ಮಹಮ್ಮದ್ ಶರಫುದ್ದೀನ್ ಅಹ್ಸನಿ ಅಲ್ ಹಾದಿ ತಂಙಳ್, ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೇಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಮತ್ತು ಸಿಇಒ ಜಯಂತ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇಣೂರು ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರತ್ನಾಕರ ಪೂಜಾರಿ, ನಿರ್ದೇಶಕರಾದ ರಾಮದಾಸ್ ನಾಯಕ್, ಎಂ.ಆರ್. ಸಂತೋಷ್ ಜೈನ್, ಆಶಾ ಸುಂದರ್, ಸಂದೀಪ್ ಹೆಗ್ಡೆ, ನಾಗಪ್ಪ, ಪ್ರಶಾಂತ್ ಪೂಜಾರಿ, ರೋಹಿಣಿ ಪ್ರಕಾಶ್, ರಾಜು ನಾಯ್ಕ, ಪ್ರವೀಣ್ ಪೆರಿಯೊಟ್ಟು, ಕೃಷ್ಣಪ್ಪ ಮೂಲ್ಯ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ, ಸಿಬ್ಬಂದಿಗಳಾದ ಭರತ್ ರಾಜ್, ರಮ್ಯ ಪಿ. ಜೈನ್, ಗೀತಾ, ದಿವ್ಯ ಕೆ., ಅಜಿತ್ ಕುಮಾರ್ ಜೈನ್, ಚಂದ್ರಶೇಖರ ಪಿ., ಶ್ರೀನಿಧಿ ಭಟ್ ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಮತ್ತು ಸದಸ್ಯರು ಉಪಸ್ಥಿತರಿದ್ದರು. ಖ್ಯಾತ ನಿರೂಪಕಿ ಸೌಜನ್ಯ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.





