October 29, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೈಸೂರು ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ಅಮಾನತು

ಅಕ್ರಮವಾಗಿ ಹಕ್ಕು ಪತ್ರ ಮಂಜೂರು ಮಾಡಿದ ಆರೋಪ – ಕರ್ತವ್ಯಲೋಪ ಸಾಬೀತು

RTI ಕಾರ್ಯಕರ್ತರು ಬಯಲಿಗೆಳೆದ ಮತ್ತೊಂದು  ಅಕ್ರಮ

ಕ್ರಮಬದ್ಧವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಯ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ರವರನ್ನು ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತೆ ಲತಾರವರ ಆದೇಶದ ಮೇರೆಗೆ ಮುಡಾ ಆಯುಕ್ತರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಕ್ರಮ RTI ಕಾರ್ಯಕರ್ತ ಬಿ.ಎನ್. ನಾಗೇಂದ್ರ ನೀಡಿದ ದೂರಿನ ಅನ್ವಯ ಕೈಗೊಳ್ಳಲಾಗಿದೆ.

ದೂರಿನ ಹಿನ್ನೆಲೆ:

ಮೈಸೂರಿನ ಗೋಕುಲಂ ಬಡಾವಣೆ 3ನೇ ಹಂತದ ಮನೆ ಸಂಖ್ಯೆ 867 ಕ್ಕೆ ದಿನಾಂಕ 02-04-1982 ರಂದು ಲಿಲಿಯನ್ ಶಾರದಾ ಜೋಸೆಫ್ (W/O ಅನ್ನಿ ಜೋಸೆಫ್) ಎಂಬುವವರಿಗೆ ಮುಡಾ ವತಿಯಿಂದ 30×40 ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿತ್ತು.

ದಿನಾಂಕ 03-09-1983 ರಂದು ಲಿಲಿಯನ್ ಜೋಸೆಫ್ ನಿಧನ ಹೊಂದಿದರೂ, ಆ ಸ್ವತ್ತು ದಿನಾಂಕ 06-04-2024ರವರೆಗೆ ಯಾರಿಗೂ ವರ್ಗಾವಣೆಯಾಗಿರಲಿಲ್ಲ. ಆದರೆ ದಿನಾಂಕ 26-03-2024 ರಂದು ಕ್ರಮಬದ್ಧ ವಾರಸುದಾರರಲ್ಲದ ನೆವಿಲ್ ಮಾರ್ಕಸ್ ಜೋಸೆಫ್ ಎಂಬುವರ ಹೆಸರಿಗೆ ಕ್ರಮಬದ್ಧ ವಂಶವೃಕ್ಷ ಪಡೆಯದೆ ಪೌತಿಖಾತೆ ವರ್ಗಾವಣೆ ಮಾಡಿ, ತುಂಡು ಜಾಗ ಮಂಜೂರಿಸಿ ಹಕ್ಕುಪತ್ರ ನೀಡಲಾಗಿದೆ. ಈ ಅಕ್ರಮದ ಬಗ್ಗೆ RTI ಕಾರ್ಯಕರ್ತ ನಾಗೇಂದ್ರರವರು ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

⚖️ ಪರಿಶೀಲನೆ ಮತ್ತು ಕ್ರಮ: ಪರಿಶೀಲನೆ ವೇಳೆ ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮಸುಂದ್ರುರವರ ಕೈವಾಡ ಇರುವುದು ಬೆಳಕಿಗೆ ಬಂದಿದೆ.

ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರದ ದುರುಪಯೋಗ: ಮುಡಾದಲ್ಲಿ ಕ್ರಯಪತ್ರ ನೀಡುವ ಅಧಿಕಾರ ಕಾರ್ಯದರ್ಶಿಗೆ ಮಾತ್ರ ನೀಡಲಾಗಿದ್ದರೂ, ಈ ಇಬ್ಬರು ಅಧಿಕಾರಿಗಳು ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ವ್ಯವಸ್ಥಾಪಕ ಸೋಮಸುಂದ್ರು ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ತಹಸೀಲ್ದಾರ್ ಕೆ.ವಿ. ರಾಜಶೇಖರ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರದ ಕ್ರಮ: ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರ ಆದೇಶದಂತೆ, ಮುಡಾ ಆಯುಕ್ತರು ಕೆ.ವಿ. ರಾಜಶೇಖರ್ ರವರನ್ನು ಅಮಾನತ್ತಿನಲ್ಲಿ ಇಡುವಂತೆ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ RTI ಕಾರ್ಯಕರ್ತರು ಬಯಲಿಗೆಳೆದ ಮತ್ತೊಂದು ಮುಡಾ ಅಕ್ರಮದ ಪತ್ತೆ ಎಂದು ಪರಿಗಣಿಸಲಾಗಿದೆ.

You may also like

News

ಮಾಹಿತಿ ಆಯೋಗದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಕುಣಿಗಲ್ ತಹಶೀಲ್ದಾರ್ ರಶ್ಮಿ ಇವರಿಗೆ ರೂಪಾಯಿ 25,000 ದಂಡ

ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಗೆ ಶಿಕ್ಷೆ ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಆಯೋಗದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಕುಣಿಗಲ್ ತಾಲ್ಲೂಕಿನ ತಹಶೀಲ್ದಾರ್ ರಶ್ಮಿ
News

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ರವರು ಜಿಲ್ಲಾ ಪ್ರತಿನಿಧಿ ನ್ಯಾಯವಾದಿ ಮಹೇಶ್ ಕಜೆ ನಿವಾಸಕ್ಕೆ ಭೇಟಿ

ಶಾಲು ಹಾಗೂ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದ ಕಜೆ ಕುಟುಂಬ ಕರ್ನಾಟಕ ಬ್ರಾಹ್ಮಣ ಸಮುದಾಯದ ಸಂಘಟನೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಇದರ ನೂತನ ಅಧ್ಯಕ್ಷ

You cannot copy content of this page