April 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಿಷಪ್ ರೆವರೆಂಡ್ ಸಿ.ಎಲ್. ಫುರ್ಟಾಡೊರವರ ಪತ್ನಿ ನಿವೃತ್ತ ಶಿಕ್ಷಕಿ ಫೌಸ್ಟಿನ್ ಸುದಾನಾ ಫುರ್ಟಾಡೊ ನಿಧನ

ಚರ್ಚ್ ಆಫ್ ಸೌತ್ ಇಂಡಿಯಾದ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನಿವೃತ್ತ ಬಿಷಪ್ ಮಂಗಳೂರಿನ ರೆವರೆಂಡ್ ಸಿ.ಎಲ್. ಫುರ್ಟಾಡೊ ಅವರ ಪತ್ನಿ 84 ವರ್ಷ ಪ್ರಾಯದ ಫೌಸ್ಟಿನ್ ಸುದಾನಾ ಫುರ್ಟಾಡೊರವರು ನವೆಂಬರ್ 25ರಂದು ಮಂಗಳವಾರ ನಿಧನ ಹೊಂದಿದರು. ಮೃತರು ಪತಿ ಬಿಷಪ್ ಸಿ.ಎಲ್. ಫುರ್ಟಾಡೊ, ಓರ್ವ ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ.

ಫೌಸ್ಟಿನ್ ಸುದಾನಾ ಫುರ್ಟಾಡೊರವರು ಮಂಗಳೂರಿನ ಮಿಲಾಗ್ರಿಸ್ ಬಾಲಕರ ಶಾಲೆ ಮತ್ತು ಸೈಂಟ್ ಆಗ್ನೆಸ್ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ, ತುಮಕೂರು ಯುನಿಟಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಮತ್ತು ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯಾಲಜಿಕಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು.

 

ಮಂಗಳೂರಿನ ಕೆಟಿಸಿಯಲ್ಲಿರುವ ಮೊಗ್ಲಿಂಗ್ ಇನ್ ಸ್ಟಿಟ್ಯೂಟ್ ಆಫ್ ಜರ್ಮನ್ ಲಾಂಗ್ವೇಜ್ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲೆ ಹಾಗೂ ಜರ್ಮನ್ ಉಪನ್ಯಾಸಕಿ ಆಗಿಯೂ ಸೇವೆ ಒದಗಿಸಿದ್ದರು. ಕೆಟಿಸಿ ಮಂಗಳೂರು ಇದರ ಕೋಶಾಧಿಕಾರಿಯಾಗಿ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ಸಿಎಸ್ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ವುಮನ್ಸ್ ಫೆಲೋಶಿಪ್ ಅಧ್ಯಕ್ಷರಾಗಿದ್ದರು ಮಾತ್ರವಲ್ಲದೆ ವೈ.ಎಂ.ಸಿ.ಎ. ಮಂಗಳೂರು ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

You may also like

News

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ – ಏಪ್ರಿಲ್ 18ಕ್ಕೆ ಪೂರ್ವಭಾವಿ ಸಭೆ ಹಾಗೂ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕದ ಸಹಯೋಗದಲ್ಲಿ ಮೇ 12ರಂದು ನಡೆಯಲಿರುವ ‘ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಸಿದ್ಧತೆಗಳು
News

ಮಂಗಳೂರು ಧರ್ಮಕ್ಷೇತ್ರದ ವಿವಿಧ ಧರ್ಮಗುರುಗಳ 2026 ನೇ ಸಾಲಿನ ವರ್ಗಾವಣೆ ಪಟ್ಟಿ ಪ್ರಕಟ

ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

You cannot copy content of this page