November 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿನಿ ಏಂಜೆಲ್ ನಿಧನ

ಕಾರ್ಕಳದ ಕ್ರೈಸ್ಟ್ ಕಿಂಗ್ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹೆಬ್ರಿ ತಾಲೂಕು ಮುದ್ರಾಡಿಯ 17ವರ್ಷ ಪ್ರಾಯದ ಏಂಜೆಲ್ ಆಲ್ಪನಾ ಜೇಮ್ಸ್ ಇಂದು ನವೆಂಬರ್ 27ರಂದು ಗುರುವಾರ ಮೃತಪಟ್ಟಿದ್ದಾಳೆ.

ನವೆಂಬರ್ 26ರಂದು ಬುಧವಾರ ಸ್ಥಳೀಯ ಕ್ರೈಸ್ಟ್ ಕಿಂಗ್ ಚರ್ಚ್‌ನ ವಾರ್ಷಿಕ ಹಬ್ಬವಿದ್ದ ಕಾರಣ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಗೆ ರಜೆ ಸಾರಲಾಗಿತ್ತು. ಹೀಗಾಗಿ ಏಂಜೆಲ್ ಮನೆಯಲ್ಲೇ ಇದ್ದಳು. ಏಕಾಏಕಿ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದ ಕಾರಣ ಹೆತ್ತವರು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಆಕೆಗೆ ಇಂಜೆಕ್ಷನ್ ನೀಡಿದ್ದರು. ಮನೆಗೆ ಬಂದ ಬಳಿಕ ಏಂಜೆಲ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮತ್ತೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾಳೆ. ವಿಷಯುಕ್ತ ಆಹಾರ ಸೇವೆನೆಯಿಂದಾಗಿ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ. ಏಂಜೆಲ್ ಜಾಕೋಬ್ ಮತ್ತು ಮೇರಿ ಬೀನಾ ದಂಪತಿಯ ಏಕೈಕ ಪುತ್ರಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

You may also like

News

ಸೂರಿಕುಮೇರು ಜಂಕ್ಷನ್‌ನಲ್ಲಿ ಪಿಕಪ್ ಡಿಕ್ಕಿ – ದಿವ್ಯಾಂಗ ಕೂಲಿ ಕಾರ್ಮಿಕ ದಾರುಣ ಸಾವು

ವಿಟ್ಲ: ರಸ್ತೆ ದಾಟುತ್ತಿದ್ದ ದಿವ್ಯಾಂಗ ಕೂಲಿ ಕಾರ್ಮಿಕರೊಬ್ಬರಿಗೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ದಾರುಣ ಘಟನೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ
News

ರಾಜ್ಯಮಟ್ಟದ ದಫ್ ಸ್ಪರ್ಧೆಯಲ್ಲಿ ಪೊಳಿಪು ತಂಡಕ್ಕೆ ಪ್ರಥಮ ಸ್ಥಾನ – 13 ತಂಡಗಳಿಂದ ಕಲಾ ಪ್ರದರ್ಶನ

ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ಪರಂಪರೆ ಹಾಗೂ ಕಲಾತ್ಮಕ ಪ್ರತಿಭೆಯ ಸಂಗಮಕ್ಕೆ ಸಾಕ್ಷಿಯಾದ ರಾಜ್ಯಮಟ್ಟದ ದಫ್ ಸ್ಪರ್ಧೆ, ದಫ್ ರಾತೀಬ್ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವು ಪುಣಚ–ಪರಿಯಾಲ್ತಡ್ಕದ ಮುಹಿಯುದ್ದೀನ್

You cannot copy content of this page