July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಿಸೆಂಬರ್ 14 ರಂದು ಶ್ರೀ ಕ್ಷೇತ್ರ ಮುಂಡೂರು ನಾಗ ಕಲ್ಲುರ್ಟಿ ನಾಗಾಂಬಿಕ ಮಂಗಳಗಿರಿ ಇಲ್ಲಿ ಅಖಂಡ ಭಜನೋತ್ಸವ

ಮುಂಡೂರು ಮಂಗಳಗಿರಿ ಶ್ರೀ ಕ್ಷೇತ್ರದ ವಠಾರದಲ್ಲಿ ಡಿಸೆಂಬರ್ 14ರಂದು ರಾತ್ರಿ ಗಂಟೆ 7 ರಿಂದ 8 ರವರೆಗೆ  ಶ್ರೀ ನಾಗಾಂಬಿಕ ದೇವಸ್ಥಾನ, ಶ್ರೀ ನಾಗಕಲ್ಲುರ್ಟಿ ದೇವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ಮುಂಡೂರು ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಗಳಗಿರಿ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಇವರ ಸಹಯೋಗದಲ್ಲಿ, ತಾಲೂಕಿನ ಸುಮಾರು 45 ಕ್ಕೂ ಹೆಚ್ಚಿನ ಭಜನಾ ಮಂಡಳಿಗಳ ಭಜಕರಿಂದ ಏಕಕಾಲದಲ್ಲಿ ಮಂಗಳಗಿರಿ ಕುಣಿತ ಭಜನೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಧರ್ಮದರ್ಶಿ ರಾಜೀವ್ ಅವರು ತಿಳಿಸಿದ್ದಾರೆ.

ಸುಮಾರು 12 ವರ್ಷಗಳ ನಂತರ ಶ್ರೀ ಕ್ಷೇತ್ರ ಮುಂಡೂರು ನಾಗಾಂಬಿಕ ಮಂಗಳಗಿರಿಯಲ್ಲಿ ನಡೆಯಲಿರುವ ದೇವಸ್ಥಾನದ ಹಾಗೂ ದೈವಗಳ ಗುಡಿಗೋಪುರಗಳ ನವೀಕರಣದೊಂದಿಗೆ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಕಾರ್ಯಕ್ರಮಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರಲಿದೆ. ಶ್ರೀ ಕ್ಷೇತ್ರದ ಮತ್ತು ಗ್ರಾಮದ ಭಕ್ತರ ಶ್ರೇಯೋಭಿವದ್ದಿಗಾಗಿ ಶ್ರೀ ಕ್ಷೇತ್ರ ನಾಗಾಂಬಿಕ ಭಜನಾ ಮಂಡಳಿ ಸದಸ್ಯರಿಂದ 48 ದಿನಗಳ ಕಾಲ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯಲಿದೆ.

 

ಡಿಸೆಂಬರ್ 11 ರಂದು ರಂಗ ಪೂಜೆ ಹಾಗೂ ಭಜನಾ ಮಂಗಲೋತ್ಸವ ಹಾಗೂ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ. ಭಗವದ್ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕ್ಷೇತ್ರದ ದೈವ-ದೇವತಾನುಗ್ರಹಕ್ಕೆ ತನು ಮನ ಧನ ಇತ್ಯಾದಿ ಭಕ್ತಿಭಾವದಿಂದ ಪಾಲ್ಗೊಳ್ಳುವುದರೊಂದಿಗೆ ಸಂಪೂರ್ಣ ಸಹಕಾರ ನೀಡುವಂತೆ  ಅನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಧರ್ಮದರ್ಶಿ ರಾಜೀವ್ ಮುಂಡೂರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

You may also like

News

41 ಬಾರಿ ವಾರೆಂಟ್ ಜಾರಿಯಾಗಿದ್ದ ಖತರ್ನಾಕ್ ಆರೋಪಿ ನೆಲ್ಸನ್ ಕೊನೆಗೂ ಪುತ್ತೂರು ಪೊಲೀಸರ ವಶಕ್ಕೆ!

ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬರೋಬ್ಬರಿ 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ
News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.

You cannot copy content of this page