July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೀ ಗುಡ್ ಡು ಗುಡ್ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಮೂಡುಬಿದಿರೆಯ ಲೇಖಕಿ ರೆಶೆಲ್ ಫೆರ್ನಾಂಡಿಸ್ ಉಪನ್ಯಾಸ

ಮೂಡುಬಿದಿರೆಯ ಖ್ಯಾತ ಲೇಖಕಿ, ಎಬಿವಿಪಿ ಸದಸ್ಯೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ರೆಶೆಲ್ ಫೆರ್ನಾಂಡಿಸ್ ಅವರು ಇತ್ತೀಚೆಗೆ ಸಮರ್ಥ ಭಾರತ ಸಂಸ್ಥೆ ಆಯೋಜಿಸಿರುವ ಸ್ವಾಮಿ ವಿವೇಕಾನಂದರ ಕುರಿತಾದ ರಾಷ್ಟ್ರವ್ಯಾಪಿ ಯುವ ಅಭಿಯಾನದ ಅಂಗವಾಗಿ ನಡೆದ ‘ಬೀ ಗುಡ್ ಡು ಗುಡ್ ಆನ್‌ಲೈನ್ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು.

ನೇರ ಪ್ರಸಾರದಲ್ಲಿ ಮಾತನಾಡಿದ ರೆಶೆಲ್ ಫೆರ್ನಾಂಡಿಸ್ ಅವರು, ಸ್ವಾಮಿ ವಿವೇಕಾನಂದರ ಆದರ್ಶಗಳು ದೇಶದ ಯುವಜನತೆಗೆ ಹೇಗೆ ಮಾರ್ಗದರ್ಶಿಯಾಗಬಲ್ಲವು ಎಂಬುದನ್ನು ವಿವರಿಸಿದರು. ವ್ಯಕ್ತಿತ್ವ ವಿಕಾಸ, ದೇಶಭಕ್ತಿ, ಆತ್ಮವಿಶ್ವಾಸ, ಸಾಮಾಜಿಕ ಹೊಣೆಗಾರಿಕೆ ಹಾಗೂ ಮೌಲ್ಯಾಧಾರಿತ ಬದುಕು ರೂಪಿಸಿಕೊಳ್ಳುವಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಮಹತ್ವವನ್ನು ಅವರು ಸ್ಪಷ್ಟವಾಗಿ ಮಂಡಿಸಿದರು.

ಯುವಕರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಂಡರೆ, ಅವರು ಕೇವಲ ಯಶಸ್ವಿ ವ್ಯಕ್ತಿಗಳಾಗುವುದಲ್ಲದೆ ದೇಶ ಮತ್ತು ಸಮಾಜಕ್ಕೆ ಮಾದರಿಯಾದ ನಾಗರಿಕರಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ಈ ‘ಬೀ ಗುಡ್ ಡು ಗುಡ್ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ದೇಶ ಹಾಗೂ ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಉಪನ್ಯಾಸಕ್ಕೆ ಆಹ್ವಾನಿಸಲಾಗಿದ್ದು, ಯುವಜನತೆಯಲ್ಲಿ ಸಕಾರಾತ್ಮಕ ಚಿಂತನೆ ಮತ್ತು ರಾಷ್ಟ್ರಸೇವೆಯ ಮನೋಭಾವ ಬೆಳೆಸುವ ಉದ್ದೇಶ ಹೊಂದಿದೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page