February 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇಶದ ಯಾವುದೇ ಭಾಗದಲ್ಲೂ ಕ್ರೈಸ್ತರ ಮೇಲಿನ ದಾಳಿಗಳನ್ನು ಸಹಿಸಲಾಗದು

ರಾಷ್ಟ್ರಮಟ್ಟದ ಹೋರಾಟಕ್ಕೆ ಸಿದ್ಧತೆ : ಸ್ಟ್ಯಾನಿ ಪಿಂಟೋ ಬೆಂಗಳೂರು

ದೇಶದ ಯಾವುದೇ ಭಾಗದಲ್ಲಿಯೂ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಾನು ಯಾವತ್ತಿಗೂ ಸಹಿಸುವುದಿಲ್ಲ. ಇಂತಹ ಅನ್ಯಾಯಗಳ ವಿರುದ್ಧ ದೇಶದಾದ್ಯಂತ ಪ್ರವಾಸ ಕೈಗೊಂಡು, ವಿವಿಧ ಕ್ರೈಸ್ತ ಸಂಘಟನೆಗಳ ಸಹಕಾರದೊಂದಿಗೆ ನಿರಂತರ ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ (ಬೆಂಗಳೂರು) ಅವರು ಕರಾವಳಿ ಸುದ್ದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳ ಮೇಲೆ ನಡೆಯುತ್ತಿರುವ ಹಲ್ಲೆ, ಬೆದರಿಕೆ ಹಾಗೂ ದೌರ್ಜನ್ಯಗಳು ಅತ್ಯಂತ ಆತಂಕಕಾರಿಯಾಗಿವೆ. ಸಂವಿಧಾನಾತ್ಮಕವಾಗಿ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳಿರುವ ಈ ದೇಶದಲ್ಲಿ, ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯಾಗಿವೆ ಎಂದು ಅವರು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ದೇಶದ ಎಲ್ಲ ಭಾಗಗಳಿಗೆ ಭೇಟಿ ನೀಡಿ, ವಿವಿಧ ಕ್ರೈಸ್ತ ಸಂಘಟನೆಗಳು, ಧಾರ್ಮಿಕ ನಾಯಕರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಕ್ರೈಸ್ತರ ಮೇಲಿನ ದಾಳಿಗಳ ವಿರುದ್ಧ ಶಾಂತಿಯುತ ಆದರೆ ದೃಢವಾದ ಹೋರಾಟವನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.

“ನಮ್ಮ ಕ್ರೈಸ್ತ ಸಹೋದರ–ಸಹೋದರಿಯರ ಗೌರವ, ಭದ್ರತೆ ಮತ್ತು ಹಕ್ಕುಗಳ ರಕ್ಷಣೆಗೆ ಅಗತ್ಯವಿದ್ದರೆ ಪ್ರಾಣ ಕೊಡಲು ಕೂಡ ನಾನು ಸಿದ್ಧನಿದ್ದೇನೆ. ಇದು ಕೇವಲ ಒಂದು ಸಮುದಾಯದ ಪ್ರಶ್ನೆಯಲ್ಲ, ದೇಶದ ಸಂವಿಧಾನ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಪ್ರಶ್ನೆಯಾಗಿದೆ” ಎಂದು ಸ್ಟ್ಯಾನಿ ಪಿಂಟೋ ಅವರು ಭಾವನಾತ್ಮಕವಾಗಿ ಹೇಳಿದರು.

ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಪಸಂಖ್ಯಾತರಿಗೆ ಭದ್ರತೆ ಒದಗಿಸುವ ಹೊಣೆಗಾರಿಕೆಯನ್ನು ಸರ್ಕಾರ ಗಂಭೀರವಾಗಿ ನಿಭಾಯಿಸಬೇಕು ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.

You may also like

News

ಅಜ್ಜ–ಅಜ್ಜಿ ಮತ್ತು ಪೋಷಕರಿಗೆ ಗೌರವ ಸಲ್ಲಿಸಿದ ಬಜ್ಪೆಯ ಬೆಥನಿ ಶಾಲೆ

“ಅಜ್ಜ–ಅಜ್ಜಿ ನಮ್ಮ ಕುಟುಂಬದ ಬೇರುಗಳು; ಪೋಷಕರು ನಮ್ಮ ಜೀವನದ ದಾರಿದೀಪಗಳು” ಎಂಬ ಸಾರ್ಥಕ ಸಂದೇಶದೊಂದಿಗೆ ಬಜ್ಪೆಯ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಅಜ್ಜ–ಅಜ್ಜಿ ದಿನ ಹಾಗೂ ಪೋಷಕರ
News

ತಂದೆಯಿಂದಲೇ 18 ವರ್ಷದ ಮಗಳ ಹತ್ಯೆ  

ಮಂಜೇಶ್ವರದಲ್ಲಿ ದಾರುಣ ಘಟನೆ – ಆರೋಪಿ ಬಂಧನ ತಂದೆಯೊಬ್ಬನು ತನ್ನ 18 ವರ್ಷದ ಮಗಳನ್ನೇ ಕಡಿದು ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ

You cannot copy content of this page