July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜುಲೈ 1ರಿಂದ ಪಾಸ್‌ಪೋರ್ಟ್ ದುಬಾರಿ! ಜೂನ್ 30ರೊಳಗೆ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು

ವಿದೇಶ ಪ್ರವಾಸ ಅಥವಾ ಉದ್ಯೋಗಕ್ಕಾಗಿ ಹೊಸ ಪಾಸ್‌ಪೋರ್ಟ್ ಪಡೆಯಲು ಯೋಜಿಸುತ್ತಿರುವವರಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಹತ್ವದ ಮಾಹಿತಿ ನೀಡಿದೆ. ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು-2026 ಅಡಿಯಲ್ಲಿ ಹೊಸ ಪಾಸ್‌ಪೋರ್ಟ್, ತತ್ಕಾಲ್ ಹಾಗೂ ಇತರೆ ಸಂಬಂಧಿತ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ಶುಲ್ಕಗಳು ಇದೇ ಜುಲೈ 1ರಿಂದ ಜಾರಿಗೆ ಬರಲಿವೆ.

ಹೀಗಾಗಿ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಉದ್ದೇಶಿಸಿರುವವರು ಜೂನ್ 30ರೊಳಗೆ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.

18 ವರ್ಷ ಮೇಲ್ಪಟ್ಟವರಿಗೆ ಹೊಸ ಪಾಸ್‌ಪೋರ್ಟ್ ಶುಲ್ಕ:

36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್: ಸಾಮಾನ್ಯ ಪ್ರಕ್ರಿಯೆ: ₹2,500, ತತ್ಕಾಲ್ ಸೇವೆ: ₹5,000

60 ಪುಟಗಳ ಜಂಬೋ ಪಾಸ್‌ಪೋರ್ಟ್ : ಸಾಮಾನ್ಯ ಪ್ರಕ್ರಿಯೆ: ₹3,500, ತತ್ಕಾಲ್ ಸೇವೆ: ₹6,000

18 ವರ್ಷದೊಳಗಿನ ಮಕ್ಕಳಿಗೆ :

36 ಪುಟಗಳ ಮೈನರ್ ಪಾಸ್‌ಪೋರ್ಟ್ : ಸಾಮಾನ್ಯ ಪ್ರಕ್ರಿಯೆ: ₹1,750, ತತ್ಕಾಲ್ ಸೇವೆ: ₹4,250

ಪಾಸ್‌ಪೋರ್ಟ್ ಕಳೆದುಹೋದರೆ ಅಥವಾ ಹಾನಿಯಾದರೆ :

36 ಪುಟಗಳ ಬದಲಿ ಪಾಸ್‌ಪೋರ್ಟ್ : ಸಾಮಾನ್ಯ ಪ್ರಕ್ರಿಯೆ: ₹5,000, ತತ್ಕಾಲ್ ಸೇವೆ: ₹7,500

60 ಪುಟಗಳ ಬದಲಿ ಪಾಸ್‌ಪೋರ್ಟ್ : ಸಾಮಾನ್ಯ ಪ್ರಕ್ರಿಯೆ: ₹6,000, ತತ್ಕಾಲ್ ಸೇವೆ: ₹8,500

ಮಕ್ಕಳ ಬದಲಿ ಪಾಸ್‌ಪೋರ್ಟ್ : ಸಾಮಾನ್ಯ ಪ್ರಕ್ರಿಯೆ: ₹4,250, ತತ್ಕಾಲ್ ಸೇವೆ: ₹6,750

ಇತರೆ ಸೇವೆಗಳ ಪರಿಷ್ಕೃತ ಶುಲ್ಕ :

ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ಹಾಗೂ ಸರೆಂಡರ್ ಸರ್ಟಿಫಿಕೇಟ್

  • ಭಾರತದಲ್ಲಿ: ₹750
  • ವಿದೇಶದಲ್ಲಿ: 40 ಅಮೆರಿಕನ್ ಡಾಲರ್

ಗುರುತಿನ ಪ್ರಮಾಣಪತ್ರ (Certificate of Identity) : ಭಾರತದಲ್ಲಿ: ₹1,000, ವಿದೇಶದಲ್ಲಿ: 50 ಅಮೆರಿಕನ್ ಡಾಲರ್

ತುರ್ತು ಪ್ರಮಾಣಪತ್ರ (Emergency Certificate) : ವಿದೇಶದಲ್ಲಿ: 15 ಅಮೆರಿಕನ್ ಡಾಲರ್

ಹೊಸ ಶುಲ್ಕಗಳು ಜುಲೈ 1ರಿಂದ ಜಾರಿಗೆ ಬರಲಿರುವುದರಿಂದ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಉದ್ದೇಶಿಸಿರುವವರು ಜೂನ್ 30ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಹೆಚ್ಚುವರಿ ವೆಚ್ಚವನ್ನು ತಪ್ಪಿಸಿಕೊಳ್ಳಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page