August 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

B.Com ಓದುತ್ತಲೇ CMA (USA) ಸಾಧನೆ – ಸಂತ ಅಗ್ನೆಸ್ ವಿದ್ಯಾರ್ಥಿನಿಗೆ ಜಾಗತಿಕ ಗೌರವ

ಸೈಂಟ್ ಅಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ದಿಯಾ ಕಾಮತ್ ಅವರು ವಿಶ್ವದ ಪ್ರತಿಷ್ಠಿತ ವೃತ್ತಿಪರ ಅರ್ಹತೆಗಳಲ್ಲಿ ಒಂದಾದ Certified Management Accountant – CMA (USA) ಪರೀಕ್ಷೆಯ ಎರಡೂ ಹಂತಗಳನ್ನು ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ಕಾಸರಗೋಡು ಜಿಲ್ಲೆಯ ಕಣ್ಹಂಗಾಡ್ ಮೂಲದ ದಿಯಾ ಕಾಮತ್ ಅವರು Part 1 – Financial Planning, Performance and Analytics ಪರೀಕ್ಷೆಯಲ್ಲಿ 72% ಹಾಗೂ Part 2 – Strategic Financial Management ಪರೀಕ್ಷೆಯಲ್ಲಿ 90% ಅಂಕಗಳನ್ನು ಗಳಿಸಿ CMA (USA) Affiliate ಸ್ಥಾನಮಾನ ಪಡೆದಿದ್ದಾರೆ.

ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿರುವಾಗಲೇ ಈ ಸಾಧನೆ ಮಾಡಿದ ಅವರು, ಪ್ರಸ್ತುತ ಬಿ.ಕಾಂ. ಬ್ಯಾಚ್‌ನಿಂದ CMA (USA) ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಿಯಾ ಅವರು ಮಾರ್ಕೆಟಿಂಗ್ ಮ್ಯಾನೇಜರ್ ಎಚ್. ಪ್ರಶಾಂತ್ ಕಾಮತ್ ಹಾಗೂ ಗೃಹಿಣಿ ಸುಶೀಲಾ ಶೆಣೈ ಕೆ. ಅವರ ಪುತ್ರಿಯಾಗಿದ್ದು, ಅವರ ಸಾಧನೆ ಪರಿಶ್ರಮ, ಶಿಸ್ತು ಹಾಗೂ ದೃಢಸಂಕಲ್ಪದ ಪ್ರತೀಕವಾಗಿದೆ.

ಈ ಯಶಸ್ಸಿಗೆ ಕಾಲೇಜಿನ ಗುಣಮಟ್ಟದ ಶೈಕ್ಷಣಿಕ ವಾತಾವರಣ ಮತ್ತು Miles Education, Bengaluru ಸಹಯೋಗದಲ್ಲಿ ದೊರೆತ ವೃತ್ತಿಪರ ತರಬೇತಿಯೂ ಪ್ರಮುಖ ಕಾರಣವಾಗಿದೆ ಎಂದು ಕಾಲೇಜು ತಿಳಿಸಿದೆ.

ಬಿ.ಕಾಂ. ಜೊತೆಗೆ ACCA ಮತ್ತು CMA ಮೊದಲಾದ ಅಂತರ್ ರಾಷ್ಟ್ರೀಯ ವೃತ್ತಿಪರ ಕೋರ್ಸ್‌ಗಳನ್ನು ಸಂಯೋಜಿತವಾಗಿ ನೀಡುತ್ತಿರುವ ಸೈಂಟ್ ಅಗ್ನೆಸ್ ಕಾಲೇಜು, Business Analytics, FinTech ಹಾಗೂ Artificial Intelligence ಮೊದಲಾದ ಭವಿಷ್ಯಮುಖಿ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ವೃತ್ತಿಪರರನ್ನಾಗಿ ರೂಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದೆ.

ದಿಯಾ ಕಾಮತ್ ಅವರ ಈ ಅಪೂರ್ವ ಸಾಧನೆಗೆ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಶೈಕ್ಷಣಿಕ ಮತ್ತು ವೃತ್ತಿಪರ ಬದುಕಿಗೆ ಶುಭ ಹಾರೈಸಿದ್ದಾರೆ.

You may also like

News

ಬೈಂದೂರಿನ ಆಶಾ ವೀಣಾ ಡಯಾಸ್‌ ಅವರಿಗೆ ‘ಕರ್ನಾಟಕ ಶೈಕ್ಷಣಿಕ ಪ್ರಶಸ್ತಿ’ ಗೌರವ

ಶಿಕ್ಷಣ, ನಿರೂಪಣೆ, ಸಹಪಠ್ಯ ಚಟುವಟಿಕೆ ಹಾಗೂ ಸಾಮಾಜಿಕ ಸೇವೆಗೆ ಸಂದ ಪ್ರತಿಷ್ಠಿತ ಮನ್ನಣೆ “ಸಾಧಿಸುವ ಛಲವಿದ್ದರೆ ಅಸಾಧ್ಯವೂ ಸಾಧ್ಯ” ಎಂಬ ಮಾತಿಗೆ ಮತ್ತೊಮ್ಮೆ ಅರ್ಥ ತುಂಬುವಂತೆ, ಉಡುಪಿ
News

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು, ಭಯ ಮೂಡಿಸುವ ಸಂದೇಶ – ಫೇಸ್‌ಬುಕ್ ಖಾತೆದಾರನ ವಿರುದ್ಧ ಪ್ರಕರಣ

ಪುತ್ತೂರು ದರ್ಭೆ ಪ್ರದೇಶದಲ್ಲಿ ಆಗಸ್ಟ್ 21ರಂದು ಶುಕ್ರವಾರ ಅಂಗಡಿಯೊಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕರಲ್ಲಿ ಭಯ ಉಂಟುಮಾಡುವ ರೀತಿಯಲ್ಲಿ ಸಂದೇಶ

You cannot copy content of this page