August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಿಯಮ ಉಲ್ಲಂಘಿಸಿದ ಶಾಲಾ ವಾಹನಗಳಿಗೆ ಆರ್‌ಟಿಒ ಶಾಕ್ – 390 ವಾಹನ ಜಪ್ತಿ, ₹11 ಲಕ್ಷಕ್ಕೂ ಅಧಿಕ ದಂಡ ಸಂಗ್ರಹ!

ಮಕ್ಕಳ ಸುರಕ್ಷತೆಯನ್ನೇ ಗಾಳಿಗೆ ತೂರಿ, ಅಗತ್ಯ ದಾಖಲೆಗಳಿಲ್ಲದೆ ರಸ್ತೆಗಿಳಿದಿದ್ದ ಖಾಸಗಿ ಶಾಲಾ-ಕಾಲೇಜು ವಾಹನಗಳ ವಿರುದ್ಧ ವಿಜಯನಗರ ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳು ಸಮರ ಸಾರಿದ್ದಾರೆ.

ಕಾರ್ಯಾಚರಣೆಯ ವಿವರ:

ವಿಜಯನಗರ ಜಿಲ್ಲೆಯಲ್ಲಿ ಫಿಟ್ನೆಸ್‌ (FC) ಹಾಗೂ ವಿಮೆ (Insurance) ನವೀಕರಣ ಮಾಡಿಸದೆ ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದ ಖಾಸಗಿ ಶಾಲಾ-ಕಾಲೇಜು ವಾಹನಗಳ ವಿರುದ್ಧ ಪ್ರದೇಶ ಸಾರಿಗೆ ಅಧಿಕಾರಿಗಳ (RTO) ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸೂಕ್ತ ದಾಖಲೆಗಳಿಲ್ಲದ ಸುಮಾರು 390 ಖಾಸಗಿ ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕಳೆದ ಫೆಬ್ರವರಿಯಿಂದ ನಿರಂತರವಾಗಿ ನಡೆದಿರುವ ಈ ತಪಾಸಣೆ ವೇಳೆಯಲ್ಲಿ:

* ಒಟ್ಟು 103 ಪ್ರಕರಣಗಳು ದಾಖಲಾಗಿವೆ.

* ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಂದ ₹11 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

* ನಿಗದಿತ ದಂಡ ಪಾವತಿಸಿ, ದಾಖಲೆ ಸರಿಪಡಿಸಿಕೊಂಡ ಬಳಿಕವಷ್ಟೇ ವಾಹನಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

RTO ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ:

ವಿಜಯನಗರ ಜಿಲ್ಲಾ RTO ಅಧಿಕಾರಿ ಕೆ. ದಾಮೋದರ ಅವರು ಶಾಲಾ ಆಡಳಿತ ಮಂಡಳಿ, ವಾಹನ ಮಾಲೀಕರು ಹಾಗೂ ಚಾಲಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ:

* ಮಕ್ಕಳ ಭದ್ರತೆಗೆ ಮೊದಲ ಆದ್ಯತೆ: ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವಂತಿಲ್ಲ.

* ದಾಖಲೆಗಳ ಸರಿಪಡೆಸುವಿಕೆ ಕಡ್ಡಾಯ: ಫಿಟ್ನೆಸ್ ಸರ್ಟಿಫಿಕೇಟ್, ಇನ್ಶುರೆನ್ಸ್ ಹಾಗೂ ಚಾಲನಾ ಪರವಾನಗಿಯನ್ನು ತಕ್ಷಣವೇ ನವೀಕರಿಸಿ ರಸ್ತೆಗೆ ವಾಹನ ಇಳಿಸಬೇಕು.

* ಮುಂದಿನ ಕ್ರಮ: ಸುರಕ್ಷತಾ ಮಾನದಂಡಗಳನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page