August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

31 ವರ್ಷಗಳ ಗ್ರಾಹಕ ವಿಶ್ವಾಸ – ಬೆಳ್ತಂಗಡಿಯ ‘ಸೋಜಾ ಎಲೆಕ್ಟ್ರಾನಿಕ್ಸ್’ನಲ್ಲಿ ‘ವಿಡಿಯಂ’ ವಿಶೇಷ ಸರ್ವಿಸ್ ಕ್ಯಾಂಪ್‌ಗೆ ಅದ್ಧೂರಿ ಚಾಲನೆ!

DYSP ರೋಹಿಣಿ ಸಿ.ಕೆ. ಅವರಿಂದ ಕಾರ್ಯಕ್ರಮ ಉದ್ಘಾಟನೆ

ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ (31 ವರ್ಷ) ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಹಾಗೂ ಅತ್ಯುತ್ತಮ ಸೇವೆಯ ಮೂಲಕ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದುಬಂದಿರುವ ಬೆಳ್ತಂಗಡಿಯ ‘ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್’ ಸಂಸ್ಥೆಯಲ್ಲಿ ‘ವಿಡಿಯಂ’ (Videom) ಕಂಪೆನಿಯ ವಿಶೇಷ ಸರ್ವಿಸ್ ಕ್ಯಾಂಪ್‌ಗೆ ಚಾಲನೆ ನೀಡಲಾಯಿತು.

ಜುಲೈ 29ರಂದು ಬುಧವಾರ ನಡೆದ ಸಮಾರಂಭವನ್ನು DYSP ರೋಹಿಣಿ ಸಿ.ಕೆ. ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ‘ಸುದ್ದಿ’ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ನಿರ್ದೇಶಕ ವಂದನೀಯ ಫಾದರ್ ಆದರ್ಶ್ ಜೋಸೆಫ್, ವಿಡಿಯಂ ಕಂಪನಿಯ ಪ್ರತಿನಿಧಿ ಲಿಖಿತ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಜ್ ಶೇಖರ್, ಹಿರಿಯ ಪತ್ರಕರ್ತರಾದ ಅಶ್ರಫ್ ಆಲಿಕುಂಞ ಹಾಗೂ ಶಿಬಿ ಧರ್ಮಸ್ಥಳ, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಮಿಶ್ರಿಯಾ, ಟೆಕ್ನಿಷಿಯನ್ ನಾಗೇಶ್, ಉಪನ್ಯಾಸಕಿ ಎಜಾ ಡಿಸೋಜ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ಸೋಜಾ ಸಂಸ್ಥೆಯ ಮಾಲಕ ಅಲ್ಫೋನ್ಸ್ ಫ್ರ್ಯಾಂಕೋ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಗಮಿಸಿದ ಅತಿಥಿಗಳನ್ನು ಆದರದಿಂದ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕ ಲ್ಯಾನ್ಸಿ ಡಿಸೋಜ ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page