October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ-ಸಜಿಪನಡು ನೂತನ ಪೊಲೀಸ್ ಠಾಣೆಗಳಿಗೆ 17 ಸಿಬ್ಬಂದಿ ಮಂಜೂರು – ತಾತ್ಕಾಲಿಕ ಕಟ್ಟಡದ ಹುಡುಕಾಟ

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಸ್ತಾವಿಸಲಾಗಿದ್ದ ಮಾಣಿ ಹಾಗೂ ಸಜಿಪನಡು ನೂತನ ಪೊಲೀಸ್ ಠಾಣೆಗಳಿಗೆ ತಲಾ 17 ಸಿಬ್ಬಂದಿ ಹುದ್ದೆಗಳ ಮಂಜೂರಾತಿಗೆ ಸರ್ಕಾರ ಅನುಮೋದನೆ ನೀಡಿದೆ. 2026ರ ಜುಲೈ 20ರಂದು ಈ ಅನುಮೋದನೆ ದೊರೆತಿದ್ದು, ನೂತನ ಠಾಣೆಗಳನ್ನು ಶೀಘ್ರದಲ್ಲೇ ಕಾರ್ಯಾರಂಭಗೊಳಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಸರ್ಕಾರದ ಅನುಮೋದನೆಯಂತೆ ಪ್ರತಿ ಠಾಣೆಗೆ ತಲಾ ಒಬ್ಬ PSI, ಒಬ್ಬ ASI, ಐದು ಹೆಡ್ ಕಾನ್‌ಸ್ಟೇಬಲ್‌ಗಳು ಹಾಗೂ 10 ಪೊಲೀಸ್ ಕಾನ್‌ಸ್ಟೇಬಲ್‌ಗಳು ಇರಲಿದ್ದಾರೆ. ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ಜಿಲ್ಲೆಯ ಇತರ ಪೊಲೀಸ್ ಠಾಣೆಗಳಿಂದ ನಿಯೋಜಿಸಲು ಚಿಂತನೆ ನಡೆಸಲಾಗಿದೆ. ನೂತನ ಠಾಣೆಗಳ ಕಾರ್ಯಾರಂಭಕ್ಕೆ ಅಗತ್ಯವಿರುವ ತಾತ್ಕಾಲಿಕ ಕಟ್ಟಡಗಳ ಹುಡುಕಾಟವೂ ಪ್ರಸ್ತುತ ನಡೆಯುತ್ತಿದೆ.

ಮಾಣಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಶಂಭೂರು, ಬರಿಮಾರು, ಕಡೆಶೀವಾಲಯ, ನೆಟ್ಲಮಡ್ನೂರು, ಅನಂತಾಡಿ, ಇಡ್ಕಿದು, ಮಾಣಿ, ಪೆರಾಜೆ, ಬಾಳ್ತಿಲ, ಗೋಲ್ತಮಜಲು, ಕೊಡಿಪ್ಪಾಡಿ, ಕಬಕ ಹಾಗೂ ಕೆದಿಲ ಹಾಗೂ ಸಜಿಪನಡು ಪೊಲೀಸ್ ಠಾಣೆ ವ್ಯಾಪ್ತಿಗೆ ಮಂಚಿ, ಇರಾ, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಬ, ಕೊಳ್ನಾಡು, ಸಾಲೆತ್ತೂರು, ಸಜಿಪಮೂಡ ಹಾಗೂ ಸಜಿಪ ಮುನ್ನೂರು ಪ್ರದೇಶಗಳನ್ನು ಸೇರ್ಪಡೆಗೊಳಿಸಲು ಪ್ರಸ್ತಾವಿಸಲಾಗಿತ್ತು.

ನೂತನ ಪೊಲೀಸ್ ಠಾಣೆಗಳ ಸ್ಥಾಪನೆಯಿಂದ ಈ ಭಾಗಗಳ ಸಾರ್ವಜನಿಕರಿಗೆ ಪೊಲೀಸ್ ಸೇವೆಗಳು ಮತ್ತಷ್ಟು ಹತ್ತಿರವಾಗಲಿದ್ದು, ಅಪರಾಧ ತಡೆಗಟ್ಟುವಿಕೆ, ತುರ್ತು ಸಂದರ್ಭಗಳಲ್ಲಿ ತ್ವರಿತ ಪೊಲೀಸ್ ನೆರವು ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರದ ಅನುಮೋದನೆಯ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ ನೂತನ ಠಾಣೆಗಳನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

You may also like

News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು
News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the

You cannot copy content of this page