September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಕಡೇಶಿವಾಲಯ ಗ್ರಾಮದ ಅಮೈಯಲ್ಲಿ ಭಾರಿ ಕಾರ್ಯಾಚರಣೆ – ಕೋಟಿ ಮೌಲ್ಯದ MDMA ಹಾಗೂ ಕೊಕೇನ್ ವಶ

ಬೆಂಗಳೂರು ಮೂಲದ ಡ್ರಗ್ಸ್ ಪೆಡ್ಲರ್ ಬಂಧನ!

ಬಂಟ್ವಾಳ ಗ್ರಾಮಾಂತರ PSI ಮಂಜುನಾಥ್ ಟಿ. ತಂಡಕ್ಕೆ ಸಾರ್ವಜನಿಕರಿಂದ ಭಾರಿ ಶ್ಲಾಘನೆ

ಹಾಸನದಿಂದ ಮಂಗಳೂರಿಗೆ ಕಾರಿನಲ್ಲಿ ಬೃಹತ್ ಪ್ರಮಾಣದ ಮಾದಕವಸ್ತು ರವಾನಿಸುತ್ತಿದ್ದ ಅಂತಾರಾಜ್ಯ ಜಾಲವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ತಡರಾತ್ರಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ MDMA ಹಾಗೂ ಕೊಕೇನ್ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬೆಂಗಳೂರು ಕೆಂಗೇರಿ ನಿವಾಸಿ 35 ವರ್ಷ ಪ್ರಾಯದ ಮಹಮ್ಮದ್ ಅಮೀರ್ ಜರ್ತಾಬ್ ಬಂಧಿತ ಆರೋಪಿ.

ಸಂಭವಿಸಿದ್ದು ಏನು?

ದಿನಾಂಕ 16.08.2026 ರಂದು ಬೆಳಗಿನ ಜಾವ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಂಜುನಾಥ ಟಿ. ಹಾಗೂ ಅವರ ಸಿಬ್ಬಂದಿ ವರ್ಗದವರು ಕಡೇಶಿವಾಲಯ ಗ್ರಾಮದ ಅಮೈ ಬಳಿ ದಾಳಿ ನಡೆಸಿದ್ದಾರೆ. KA-01-MA-1284 ನೋಂದಣಿಯ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಚಾಲಕ ಮಾದಕವಸ್ತು ಇರುವುದನ್ನು ಒಪ್ಪಿಕೊಂಡಿದ್ದಾನೆ.

ವಶಪಡಿಸಿಕೊಂಡ ಸೊತ್ತುಗಳ ವಿವರ:

* MDMA (538.63 ಗ್ರಾಂ): ಅಂದಾಜು ಮೌಲ್ಯ ₹53,86,300/-

* ಕೊಕೈನ್ (99.12 ಗ್ರಾಂ): ಅಂದಾಜು ಮೌಲ್ಯ ₹49,56,000/-

* ಇತರೆ ಸೊತ್ತುಗಳು: ಡಿಜಿಟಲ್ ತೂಕದ ಯಂತ್ರ, ಖಾಲಿ ಪ್ಲಾಸ್ಟಿಕ್ ಡಬ್ಬಿಗಳು ಹಾಗೂ ಸಾಗಾಟಕ್ಕೆ ಬಳಸಿದ ಕಾರು.

* ಒಟ್ಟು ಸೊತ್ತುಗಳ ಮೌಲ್ಯ: ₹1,05,59,450/- (ಒಂದು ಕೋಟಿಯ ಐದು ಲಕ್ಷದ ಐವತ್ತೊಂಬತ್ತು ಸಾವಿರದ ನಾಲ್ಕು ನೂರ ಐವತ್ತು ರೂಪಾಯಿಗಳು).

ತನಿಖೆ ಮತ್ತು ಕಾನೂನು ಕ್ರಮ:

ಈ ಕಾರ್ಯಾಚರಣೆಯು ಬಂಟ್ವಾಳ ASP ಯಶ್ ಕುಮಾರ್ ಶರ್ಮ IPS ಹಾಗೂ ಬಂಟ್ವಾಳ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 113/2026, ಕಲಂ: 8(C) r/w 22(C), 21(ಬಿ) NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಜಾಲದ ಹಿನ್ನೆಲೆಯ ಬಗ್ಗೆ ತನಿಖೆ ಮುಂದುವರಿಸಲಾಗಿದೆ.

ಸಫಲ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ:

ಈ ಭಾರಿ ಜಾಲವನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು:

* ಮಂಜುನಾಥ್ ಟಿ. PSI

* ಎಚ್.ಸಿ. ಪ್ರಶಾಂತ್

* ಎಚ್.ಸಿ. ಲೋಕೇಶ್

* ಎಚ್.ಸಿ. ಶ್ರೀಧರ್

* ಎಚ್.ಸಿ. ನಜೀರ್

* ಪಿ.ಸಿ. ಅಶೋಕ್

* ಪಿ.ಸಿ. ರಾಘವೇಂದ್ರ

* ಪಿ.ಸಿ. ವಿವೇಕ್

* ಪಿ.ಸಿ. ಕುಮಾರ್

* ಪಿ.ಸಿ. ಮಾರುತಿ

*ಪಿ.ಸಿ. ಉದಯ್

ಖಚಿತ ಮಾಹಿತಿಯ ಆಧಾರದ ಮೇಲೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಂಟ್ವಾಳ ಗ್ರಾಮಾಂತರ ಠಾಣೆಯ PSI ಮಂಜುನಾಥ್ ಟಿ. ಹಾಗೂ ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

You may also like

News

ರಾಜೇಶ್ ನಾಯಕ್ ಕರೋಪಾಡಿ ಗಡಿಪಾರು ಆದೇಶ ಖಂಡನೀಯ – ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುವ ಪ್ರಯತ್ನ ಎಂದ ಬಂಟ್ವಾಳ ಬಿಜೆಪಿ

ಹಿಂದೂ ಸಂಘಟನೆಯ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೇಶ್ ನಾಯಕ್ ಕರೋಪಾಡಿ ಅವರ ವಿರುದ್ಧ ಪೊಲೀಸ್ ಇಲಾಖೆ ಕೈಗೊಂಡಿರುವ ಗಡಿಪಾರು ಆದೇಶವನ್ನು ಬಂಟ್ವಾಳ ಬಿಜೆಪಿ ಮಂಡಲ ತೀವ್ರವಾಗಿ
News

National Nutrition Week 2026 Celebrated with a Focus on Healthy Choices and Better Health

“Nourishing Lives Through Healthy Choices” National Nutrition Week 2026 was observed with the theme “Nourishing Lives Through Healthy Choices” through

You cannot copy content of this page