September 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಗರ್ನಾಡ್ ಚರ್ಚ್‌ನ ಶಾಂತಿ ಡಿಸೋಜ ನಿಧನ

ಮೊಗರ್ನಾಡ್ ಚರ್ಚ್‌ನ 51 ವರ್ಷ ಪ್ರಾಯದ ಶಾಂತಿ ಡಿಸೋಜ, ಆಲ್ಬರ್ಟ್ ಡಿಸೋಜ ಅವರ ಪತ್ನಿ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 16ರಂದು ಭಾನುವಾರ ನಿಧನ ಹೊಂದಿದರು. ಮೃತರು ಪತಿ ಆಲ್ಬರ್ಟ್ ಡಿಸೋಜ, ಪುತ್ರಿಯರಾದ ಶೆಲ್ಮಾ ಟ್ರೀಜಾ ಡಿಸೋಜ ಹಾಗೂ ಶೈನಿ ಆಶ್ಲಿನ್ ಡಿಸೋಜ, ಅಳಿಯಂದಿರಾದ ಹ್ಯಾರಿಸನ್ ಅಲ್ಬುಕರ್ಕ್ ಮತ್ತು ರೆನ್‌ಸನ್ ಸೆರಾವೊ, ಮೊಮ್ಮಗ ಹೈಜೆನ್ ಶೆಲ್ಟನ್ ಅಲ್ಬುಕರ್ಕ್ ಅವರನ್ನು ಅಗಲಿದ್ದಾರೆ.

ಪೀಟರ್ ಲೋಬೊ ಮತ್ತು ಬೆನ್ನಿ ಡಿಸೋಜ ಅವರ ಪುತ್ರಿಯಾಗಿದ್ದ ಅವರು, ಶಿವಮೊಗ್ಗ ಧರ್ಮಕ್ಷೇತ್ರದ ಚೆನ್ನಗಿರಿಯ ವಂದನೀಯ ಜಾರ್ಜ್ ಲೋಬೊ, ಇವಾನ್ ಲೋಬೊ, ವಾಲ್ಟರ್ ಲೋಬೊ ಹಾಗೂ ಲಾಯ್ಡ್ ಲೋಬೊ ಅವರ ಸಹೋದರಿ.

ಮೃತರ ಅಂತಿಮ ಯಾತ್ರೆಯು ಆಗಸ್ಟ್ 18ರಂದು ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ರಾಯಪ್ಪಕೋಡಿ ಮನೆಯಿಂದ ಹೊರಡಲಿದೆ. ಬಳಿಕ ಮೊಗರ್ನಾಡ್, ಅಮ್ಟೂರು ದೇವಮಾತ ಚರ್ಚ್‌ನಲ್ಲಿ ಅಂತಿಮ ಯಾತ್ರೆಯ ಬಲಿಪೂಜೆ ಹಾಗೂ ಸಮಾಧಿ ವಿಧಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ 97414 71620 / 77609 01728 ಸಂಪರ್ಕಿಸಲು ಕೋರಲಾಗಿದೆ.

You may also like

News

ಉದ್ಯಮ ಕ್ಷೇತ್ರದ ಸಾಧನೆಗೆ ಪ್ರತಿಷ್ಠಿತ ಗೌರವ – ಪಾದೆ ಅಜಿತ್ ರೈ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ’ ಪ್ರಶಸ್ತಿ

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನದ 30ನೇ ವಾರ್ಷಿಕ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ಕುಶಲ್ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ನಗರದ
News

ಸಂಗೀತದಿಂದ ದೈವಿಕ ಆನಂದದ ರಸದೌತಣ – ಮಂಗಳೂರು ರಾಮಕೃಷ್ಣ ಮಠದಲ್ಲಿ ‘ರಾಗ ಸುಧಾ’ ಸಂಗೀತ ಸಂಭ್ರಮ

ಮಂಗಳೂರು: “ಸಂಗೀತ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ಆಧ್ಯಾತ್ಮಿಕ ಸಾಧನೆ. ಸೃಷ್ಟಿಯ ಆದಿಯಿಂದಲೂ ನಮ್ಮೊಂದಿಗಿರುವ ಸಂಗೀತದ ಮೂಲಕ ದೈಹಿಕ ಹಾಗೂ ಮಾನಸಿಕ ಶಾಂತಿಯ ಜೊತೆಗೆ ದೈವಿಕ ಆನಂದವನ್ನು

You cannot copy content of this page