September 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಸಿಒಡಿಪಿಯಲ್ಲಿ ಲಿಂಗ ಸಮಾನತಾ ತಂಡಕ್ಕೆ ಸಾಮರ್ಥ್ಯ ತರಬೇತಿ

ಮಹಿಳಾ ಸಬಲೀಕರಣ ಯೋಜನೆಯಡಿ 50 ಮಂದಿ ಭಾಗಿ

ಮಹಿಳಾ ಸಬಲೀಕರಣ ಯೋಜನೆಯಡಿ ಬೆಂಗಳೂರು ಕ್ರಾಸ್ ಸಂಸ್ಥೆ ಹಾಗೂ ಮಂಗಳೂರು ಸಿಒಡಿಪಿ ಸಂಸ್ಥೆಗಳ ಸಹಯೋಗದಲ್ಲಿ ಲಿಂಗ ಸಮಾನತಾ ಪ್ರೇರಕ ತಂಡದ ಸಾಮರ್ಥ್ಯ ಬಲವರ್ಧನಾ ತರಬೇತಿ ಕಾರ್ಯಕ್ರಮ ಇಂದು ಸೆಪ್ಟೆಂಬರ್ 15ರಂದು ಮಂಗಳವಾರ ಸಿಒಡಿಪಿ ಸಂಸ್ಥೆಯಲ್ಲಿ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬಾಹ್ಯ ಲಿಂಗ ಸಮಾನತಾ ತಂಡದ ಸದಸ್ಯೆ ರೋಸಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಕ್ರಾಸ್ ಸಂಸ್ಥೆಯ ಬೆಂಗಳೂರು ರಾಜ್ಯ ಸಂಯೋಜಕಿ ಭಗಿನಿ ಕ್ರಿಸ್ತಿನಾ ಮತ್ತು ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸುಪ್ರಿಯಾ ಉಪಸ್ಥಿತರಿದ್ದರು.

ವಿವಿಧ ಒಕ್ಕೂಟಗಳು, ಮಹಾಸಂಘಗಳು ಹಾಗೂ ಲಿಂಗ ಸಮಾನತಾ ಪ್ರೇರಕ ತಂಡದ 50 ಮಂದಿ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದರು.

ಮಹಿಳಾ ಸಬಲೀಕರಣ ಯೋಜನೆಯ ಕಾರ್ಯಕರ್ತೆ ಜೆಸಿಂತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತೆ ಗುಲಾಬಿ ಸ್ವಾಗತಿಸಿದರು. ಕಾರ್ಯಕರ್ತ ಆಂಥೋನಿ ವಂದಿಸಿದರು.

You may also like

News

ಅಕ್ರಮ ಕೆಂಪುಕಲ್ಲು ಸಾಗಾಟ – ವಿಟ್ಲ ಪೊಲೀಸರ ದಾಳಿ, ನಾಲ್ವರ ವಿರುದ್ಧ ಪ್ರಕರಣ

PSI ರಾಮಕೃಷ್ಣ ಹಾಗೂ ಸಿಬ್ಬಂದಿಯಿಂದ ದಾಳಿ – ವಾಹನಗಳು ವಶ ಯಾವುದೇ ರಶೀದಿ ಅಥವಾ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ
News

Father Muller Homoeopathic Pharmaceutical Division and P.A. College of Pharmacy Sign MoU to Strengthen Academic–Industry Collaboration

Father Muller Homoeopathic Pharmaceutical Division (FMHPD), a unit of Father Muller Charitable Institutions, and P.A. College of Pharmacy, Mangaluru, entered

You cannot copy content of this page