October 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರಮೋದ್ ಮುತಾಲಿಕ್ ಪ್ರಚಾರಪ್ರಿಯ, ಸಮಾಜ ಒಡೆಯುವ ದ್ವೇಷ ರಾಜಕಾರಣಿ – AICU ಮಾಜಿ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಕಿಡಿ

ದಸರಾ ರಜೆ ವಿವಾದ – ಮುತಾಲಿಕ್ ಹೇಳಿಕೆಗೆ ತಿರುಗೇಟು

ಮಂಗಳೂರು: ದಸರಾ ರಜೆ ಹಾಗೂ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಗಳಿಗೆ ಅಖಿಲ ಭಾರತ ಕಥೊಲಿಕ್ ಯೂನಿಯನ್ (AICU) ಮಾಜಿ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುತಾಲಿಕ್ ಅವರು ಸಪ್ಟೆಂಬರ್ 28ರಂದು ಮಂಗಳೂರಿನಲ್ಲಿ ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ದಸರಾ ರಜೆ ವೇಳೆ ತರಗತಿ ಅಥವಾ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.

ಅಲ್ವಿನ್ ಡಿಸೋಜ ಪಾನೀರ್ ಮಾತನಾಡಿ, ಶಾಲೆಗಳ ರಜೆ ಮತ್ತು ಶೈಕ್ಷಣಿಕ ವೇಳಾಪಟ್ಟಿ ಧಾರ್ಮಿಕ ಸಂಘರ್ಷದ ವಿಷಯವಾಗಬಾರದು; ಅವು ಸರ್ಕಾರದ ನಿಯಮಗಳು ಹಾಗೂ ಸಂಬಂಧಪಟ್ಟ ಶಿಕ್ಷಣ ಮಂಡಳಿಗಳ ನಿಯಮಾವಳಿಯಂತೆ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಯಾವುದೇ ಶಾಲೆ, ನಿಯಮ ಉಲ್ಲಂಘಿಸಿದ್ದರೆ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಧರ್ಮಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇರುವ ಹಿನ್ನೆಲೆಯಲ್ಲಿ, ಇಂತಹ ವಿಚಾರಗಳನ್ನು ಧಾರ್ಮಿಕ ಸಂಘರ್ಷದ ರೂಪ ನೀಡದೆ ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ರೀತಿಯಲ್ಲಿ ಚರ್ಚಿಸಬೇಕು ಎಂದು ಅವರು ಹೇಳಿದ್ದಾರೆ.

ಮತಾಂತರದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅಲ್ವಿನ್ ಡಿಸೋಜ ಪಾನೀರ್ “ಮತಾಂತರದ ಆರೋಪಗಳಿಗೆ ಸ್ಪಷ್ಟ ಹಾಗೂ ಪರಿಶೀಲಿಸಬಹುದಾದ ಸಾಕ್ಷ್ಯ ನೀಡಬೇಕು” ಎಂದು ಸವಾಲು ಹಾಕಿದ್ದಾರೆ. ಯಾವುದೇ ಕಾನೂನು ಉಲ್ಲಂಘನೆ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ; ಆದರೆ ಸಮುದಾಯಗಳ ನಡುವೆ ಅನುಮಾನ ಅಥವಾ ಸಂಘರ್ಷ ಉಂಟುಮಾಡುವ ಹೇಳಿಕೆಗಳನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸೌಹಾರ್ದತೆ ಮತ್ತು ಕಾನೂನು ಪಾಲನೆಯೇ ಶಿಕ್ಷಣ ಕ್ಷೇತ್ರದ ಮುಖ್ಯ ಆಶಯವಾಗಬೇಕು ಎಂದು ಅಲ್ವಿನ್ ಡಿಸೋಜ ಪಾನೀರ್ ಮಾಧ್ಯಮ ಪ್ರತಿನಿದಿಗಳೊಂದಿಗೆ ತಿಳಿಸಿದ್ದಾರೆ.

You may also like

News

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ವಂದನೀಯ ಫಾದರ್ ಜೋನ್ ನೊರೊನ್ಹಾ ನಿಧನ

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು 82 ವರ್ಷ ಪ್ರಾಯದ ವಂದನೀಯ ಫಾದರ್ ಜೋನ್ ನೊರೊನ್ಹಾ ಅವರು ಇಂದು ಅಕ್ಟೋಬರ್ 1ರಂದು ಗುರುವಾರ ಜೆಪ್ಪುವಿನ ಸೈಂಟ್ ಜೂಜೆ ವಾಜ್
News

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ: ಭಜನೆಯಿಂದ ಆರೋಗ್ಯ, ಸಾಮರಸ್ಯ ಹಾಗೂ ಸದ್ಗುಣ ವೃದ್ಧಿ – ವಿವೇಕ್ ಪಾಯಸ್

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನದ ಶಿಬಿರ ಸೆಪ್ಟೆಂಬರ್

You cannot copy content of this page