ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ವಂದನೀಯ ಫಾದರ್ ಜೋನ್ ನೊರೊನ್ಹಾ ನಿಧನ
ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು 82 ವರ್ಷ ಪ್ರಾಯದ ವಂದನೀಯ ಫಾದರ್ ಜೋನ್ ನೊರೊನ್ಹಾ ಅವರು ಇಂದು ಅಕ್ಟೋಬರ್ 1ರಂದು ಗುರುವಾರ ಜೆಪ್ಪುವಿನ ಸೈಂಟ್ ಜೂಜೆ ವಾಜ್ ಹೋಮ್ ನಲ್ಲಿ ನಿಧನರಾದರು.

1944ರ ಏಪ್ರಿಲ್ 2ರಂದು ಪಾಂಬೂರಿನಲ್ಲಿ ಮಥಿಯಾಸ್ ಮತ್ತು ಆಂಜೆಲಿನ್ ನೊರೊನ್ಹಾ ದಂಪತಿಯ ಪುತ್ರರಾಗಿ ಜನಿಸಿದ ಅವರು, ಧಾರ್ಮಿಕ ಸೇವೆಯ ಕರೆಗೆ ಓಗೊಟ್ಟು 1969ರ ಡಿಸೆಂಬರ್ 3ರಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಧರ್ಮಸೇವೆಯಲ್ಲಿ ಅವರು ಅಗ್ರಾರ್, ಕಿರೆಂ ಮತ್ತು ಮಡಂತ್ಯಾರ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ, ಕುಪ್ಪೆಪದವು, ಉಪ್ಪಿನಂಗಡಿ, ಕೊಳಲಗಿರಿ, ರಾಣಿಪುರ ಹಾಗೂ ಕಲ್ಯಾಣಪುರದ ಮೌಂಟ್ ರೋಸರಿ ಸೇರಿದಂತೆ ಹಲವು ಧರ್ಮಕೇಂದ್ರಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. 1988–89ರಲ್ಲಿ ರೋಸಾಮಿಸ್ಟಿಕಾ ಕಾನ್ವೆಂಟ್‌ನಲ್ಲಿ ಚಾಪ್ಲಿನ್ ಆಗಿಯೂ ಸೇವೆ ಸಲ್ಲಿಸಿದ್ದರು.


ದೀರ್ಘಕಾಲದ ಸಕ್ರಿಯ ಧರ್ಮಸೇವೆಯ ಬಳಿಕ 2010ರಲ್ಲಿ ನಿವೃತ್ತರಾದ ಅವರು, ಬಳಿಕ ತಮ್ಮ ಜೀವನದ ಉಳಿದ ಅವಧಿಯನ್ನು ಸೈಂಟ್ ಜೂಜೆ ವಾಜ್ ಹೋಮ್ ನಲ್ಲಿ ಕಳೆದರು.
ಅವರ ಅಂತ್ಯಕ್ರಿಯೆ ಹಾಗೂ ಅಂತಿಮ ವಿಧಿವಿಧಾನಗಳು ಅಕ್ಟೋಬರ್ 5ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ವಾಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್‌ನಲ್ಲಿ ನಡೆಯಲಿವೆ.

ಫೋಟೊ ಮತ್ತು ವರದಿ
ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್
ನಿರ್ದೇಶಕರು, ಕೆನರಾ ಕಮ್ಯೂನಿಕೇಷನ್ ಸೆಂಟರ್, ಮಂಗಳೂರು ಧರ್ಮಕ್ಷೇತ್ರ




