ದಸರಾ ಪ್ರವಾಸಕ್ಕೆ KSRTC ವಿಶೇಷ ಪ್ಯಾಕೇಜ್ – 5 ಧಾರ್ಮಿಕ ಪ್ರವಾಸ ಮಾರ್ಗಗಳಿಗೆ ಅವಕಾಶ
6ರಿಂದ 12 ವರ್ಷದ ಮಕ್ಕಳಿಗೆ ವಿಶೇಷ ದರ – ಊಟದ ವ್ಯವಸ್ಥೆಯೂ ಲಭ್ಯ

ದಸರಾ ಹಬ್ಬದ ಪ್ರಯುಕ್ತ ಮಂಗಳೂರು KSRTC ವಿಭಾಗವು ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಿಗೆ ಐದು ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸಿದೆ. ಅಕ್ಟೋಬರ್ 11ರಿಂದ 20ರ ತನಕ ಈ ವಿಶೇಷ ಪ್ರವಾಸಗಳು ಕಾರ್ಯಾಚರಿಸಲಿದ್ದು, ಕುಟುಂಬ ಸಮೇತರಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ.
ಈ ವಿಶೇಷ ಪ್ರವಾಸಗಳಲ್ಲಿ ವಯಸ್ಕರು ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ಪ್ರತ್ಯೇಕ ಪ್ರಯಾಣ ದರ ನಿಗದಿಪಡಿಸಲಾಗಿದೆ. ಕೆಲವು ಪ್ಯಾಕೇಜ್‌ಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಮಂಗಳೂರು ದಸರಾ ನವದುರ್ಗ ದರ್ಶನ: ಬೆಳಿಗ್ಗೆ 8ಕ್ಕೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕೊಡ್ಯಾಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ, ಉರ್ವ ಮಾರಿಯಮ್ಮ ದೇವಸ್ಥಾನ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಗಳಿಗೆ ಭೇಟಿ ನೀಡಲಿದೆ. ರಾತ್ರಿ 8.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹500 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹400. ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ.
ಮಂಗಳೂರು–ತಲಕಾವೇರಿ–ಭಾಗಮಂಡಲ: ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಶ್ರೀ ಭಗಂಡೇಶ್ವರ ಸ್ವಾಮಿ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿಪಾಲ್ಸ್ ಹಾಗೂ ರಾಜಾಸೀಟ್‌ಗೆ ಭೇಟಿ ನೀಡಲಿದೆ. ರಾತ್ರಿ 9.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹600 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹500.

ಮಂಗಳೂರು–ಕೊಲ್ಲೂರು: ಬೆಳಿಗ್ಗೆ 8ಕ್ಕೆ ಹೊರಡುವ ಬಸ್ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕಾಪು ಮಾರಿಯಮ್ಮ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಲಿದೆ. ರಾತ್ರಿ 8ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹600 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹500. ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ.
ಮಂಗಳೂರು–ಸಿಗಂದೂರು: ಬೆಳಿಗ್ಗೆ 7ಕ್ಕೆ ಮಂಗಳೂರಿನಿಂದ ಹೊರಡುವ ಬಸ್ ಕುಂದಾಪುರ ಮಾರ್ಗವಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ರಾತ್ರಿ 7.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹700 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹600.
ಮಂಗಳೂರು–ಶೃಂಗೇರಿ: ಬೆಳಿಗ್ಗೆ 8ಕ್ಕೆ ಹೊರಡುವ ಬಸ್ ಕೊಡ್ಯಾಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಶಾರದಾಂಬ ದೇವಸ್ಥಾನ, ಹರಿಹರಪುರ ಮಠ, ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನ ಹಾಗೂ ಕಿಗ್ಗ ಕ್ಷೇತ್ರಗಳಿಗೆ ಭೇಟಿ ನೀಡಿ ರಾತ್ರಿ 7.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹600 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹500. ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ.


ಮುಂಗಡ ಬುಕ್ಕಿಂಗ್ ಲಭ್ಯ:
ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಪ್ಯಾಕೇಜ್ ಬಸ್‌ಗಳಿಗೆ www.ksrtc.in ಮೂಲಕ ಮುಂಗಡ ಸೀಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ. ದಸರಾ ರಜೆಯಲ್ಲಿ ಕುಟುಂಬ ಸಮೇತರಾಗಿ ಪ್ರವಾಸ ಕೈಗೊಳ್ಳಲು ಬಯಸುವವರು ಈ ವಿಶೇಷ ಪ್ಯಾಕೇಜ್‌ಗಳ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು 1ನೇ ಘಟಕ ವ್ಯವಸ್ಥಾಪಕರು 7760990713, 3ನೇ ಘಟಕ ವ್ಯವಸ್ಥಾಪಕರು 7760990723, ಮುಂಗಡ ಬುಕ್ಕಿಂಗ್ ಕೌಂಟರ್ 9663211553, ಮಂಗಳೂರು ಬಸ್ ನಿಲ್ದಾಣ 7760990720, ವಿಭಾಗೀಯ ಕಚೇರಿ 7760990711 / 9663266221 ಸಂಪರ್ಕಿಸಬಹುದು ಎಂದು ಮಂಗಳೂರು KSRTC ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



