April 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೆಪ್ಟೆಂಬರ್ 11ರಂದು  “ಪ್ರೀತಿ ಹರಡಲಿ ಎಲ್ಲೆಡೆ” ಘೋಷವಾಕ್ಯದೊಂದಿಗೆ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ 8ನೇ ವರ್ಷದ ಸಂಭ್ರಮ

ಮಾನವೀಯತೆ, ಸಹಬಾಳ್ವೆ ಹಾಗೂ ಪ್ರಜಾಪ್ರಭುತ್ವದ ಸವಾಲುಗಳ ಬಗ್ಗೆ ಚರ್ಚಿಸಲು ಅವಕಾಶ

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮ

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ 8ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಚಾರ ಸಂಕಿರಣ “ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು – ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು”ಎಂಬ ವಿಷಯದ ಮೇಲೆ ಸೆಪ್ಟೆಂಬರ್ 11ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಕೇರಳ ರಾಜ್ಯದ ಸಂಸತ್ ಸದಸ್ಯರಾದ ಜಾನ್ ಬ್ರಿಟ್ಟಾಸ್ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ವಿಚಾರ ಮಂಡಿಸಲಿರುವರು. ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಹಾಗೂ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಇವರು ಪ್ರತಿಕ್ರಿಯಿಸಲಿರುವರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ತೆಲಿನೋರವರು ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಲಿರುವರು. ಇದಕ್ಕೆ ಪೂರಕವಾಗಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪೂರ್ವ ಭಾವೀ ಸಭೆಯು ನಿನ್ನೆ ಆಗಸ್ಟ್ 22ರಂದು ಶುಕ್ರವಾರ ನಗರದಲ್ಲಿ ರೋಯ್ ಕ್ಯಾಸ್ತೆಲಿನೋರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 70ಕ್ಕೂ ಹೆಚ್ಚು ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು.

ಕಾರ್ಯಕ್ರಮದ ವರ್ಣರಂಜಿತ ಕರಪತ್ರವನ್ನು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ತೆಲಿನೋರವರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಇವರಿಗೆ ನೀಡಿ ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 11ರ ಕಾರ್ಯಕ್ರಮದ ಯಶಸ್ಸಿಗಾಗಿ ಅನೇಕರು ಸಭೆಯಲ್ಲಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕ ಲಕ್ಷ್ಮಣ್, ಯೆನಪೋಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಜೀವನ್ ರಾಜ್ ಕುತ್ತಾರ್, ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕಿ ಫ್ಲೋರಾ ಕ್ಯಾಸ್ತೆಲಿನೋ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಮಹಿಳಾ ಮುಖಂಡರಾದ ಸುಮತಿ ಎಸ್. ಹೆಗ್ಡೆ, ವೇದಿಕೆಯ ಪ್ರಮುಖರಾದ ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ AICU ರಾಜ್ಯಾಧ್ಯಕ್ಷ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೋ ಬಂಟ್ವಾಳ, ಸಿಟಿ ವಲಯದ ನಿಕಟ ಪೂರ್ವ ಅಧ್ಯಕ್ಷ ಅರುಣ್ ಡಿಸೋಜ ಶಕ್ತಿನಗರ, ಡಾ. ಕ್ರಷ್ಣಪ್ಪ ಕೊಂಚಾಡಿ, ಡಾ. ವಸಂತ ಕುಮಾರ್, ಕೆ. ಕರಿಯ, ಎರಿಕ್ ಲೋಬೋ, ಫ್ಲೇವಿ ಕ್ರಾಸ್ತಾ ಅತ್ತಾವರ, ಮರ್ಲಿನ್ ರೇಗೋ, ಬಿ.ಎನ್. ದೇವಾಡಿಗ, ಮಿಥುನ್ ರಾಜ್ ಕುತ್ತಾರ್, ಅಶೋಕನ್ ಬೋಳಾರ, ಸಂತೋಷ್ ಡಿಸೋಜ ಪಂಜಿಮೊಗೆರು, ಸಮರ್ಥ್ ಭಟ್, ಶಿಕ್ಷಕಿ ಗ್ರೆಟ್ಟಾ, ಎಸ್.ಎಲ್. ಪಿಂಟೋ, ಅಸುಂತಾ ಡಿಸೋಜ, ವಿದ್ಯಾ ಶೆಣೈ, ಜೆ. ಇಬ್ರಾಹಿಂ ಜೆಪ್ಪು, ಹೆಝಲ್ ಟೀಚರ್, ಕ್ವೀನಿ ಪರ್ಸಿ ಆನಂದ್, ಪುರುಷೋತ್ತಮ ಪೂಜಾರಿ, ಫ್ಲೋರಿನ್ ಡಿಸೋಜ, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಟೋನಿ ಪಿಂಟೊ, ಚರಣ್ ಶೆಟ್ಟಿ, ನವೀನ್ ಕೊಂಚಾಡಿ, ಫೆಲಿಕ್ಸ್ ಡಿಸೋಜ, ರಾಕೇಶ್ ಕುಂದರ್, ಓಸ್ವಾಲ್ಡ್ ಪುರ್ತಾಡೋ, ಜೇಮ್ಸ್ ಪ್ರವೀಣ್, ಕಮಲಾಕ್ಷ ಜಲ್ಲಿಗುಡ್ಡ, ರವೀಂದ್ರ ವಾಮಂಜೂರು, ಕ್ರಿಸ್ಟನ್ ಮೆನೇಜಸ್, ಶೇಖರ್ ವಾಮಂಜೂರು, ನಿತಿನ್ ಬಂಗೇರ ಯೆಯ್ಯಾಡಿ, ತಯ್ಯುಬ್ ಬೆಂಗರೆ, ರೆಹಮಾನ್ ಖಾನ್ ಕುಂಜತ್ತಬೈಲ್, ಜ್ಯೋತಿ, ಮಹಮ್ಮದ್ ಆಯೂಬ್ ಷಾ, ನೀತಾ ಡಿಸೋಜ, ಶೈಲಜಾ ರಾಜೇಶ್, ಕ್ರಷ್ಣ ಇನ್ನಾ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೂಲಕ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬೌದ್ಧಿಕ ಹಾಗೂ ಸಾಮಾಜಿಕ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ ಮಾನವೀಯತೆ, ಸಹಬಾಳ್ವೆ ಹಾಗೂ ಪ್ರಜಾಪ್ರಭುತ್ವದ ಸವಾಲುಗಳ ಬಗ್ಗೆ ಚರ್ಚಿಸಲು ಅವಕಾಶ ದೊರಕುತ್ತಿದೆ.

You may also like

News

ಬಂಟ್ವಾಳದ ತೌಹೀದ್ ಶಾಲೆಗೆ ಕೀರ್ತಿ ತಂದ ಆಭಿದುನ್ನೀಸ – SSLC ಪರೀಕ್ಷೆಯಲ್ಲಿ ಭರ್ಜರಿ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಮಟ್ಟದ SSLC ಪರೀಕ್ಷಾ ಫಲಿತಾಂಶದಲ್ಲಿ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಭಿದುನ್ನೀಸ ಎಂ. ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ
News

ಪಾಲ್ದನೆ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ – ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನ ಶೈಕ್ಷಣಿಕ ಆಯೋಗದ ವತಿಯಿಂದ ಇತ್ತೀಚೆಗೆ

You cannot copy content of this page