July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ರಫ್ ಬಂಧನ

ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಗಂಭೀರ ಪ್ರಕರಣಗಳ ಆರೋಪಿ ಮಂಜೇಶ್ವರ ತಾಲೂಕಿನ ಕೂಳೂರು ಗ್ರಾಮದ 32 ವರ್ಷ ಪ್ರಾಯದ ಅಶ್ರಫ್ @ ಚಿಲ್ಲಿ ಅಶ್ರಫ್ ಎಂಬಾತನನ್ನು ಸೆಪ್ಟೆಂಬರ್ 21ರಂದು ಭಾನುವಾರ ಕೂಳೂರು, ಮಂಜೇಶ್ವರದಲ್ಲಿ ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

🔹 ಪ್ರಕರಣ – 1: ವಿಟ್ಲ ಪೊಲೀಸ್ ಠಾಣಾ ಅ.ಕ್ರ. 165/2015, ಕಲಂ 397 IPC. 07-08-2015 ರಂದು ವಿಟ್ಲಪೇಟೆಯಲ್ಲಿ ಜಗದೀಶ್ ಕಾಮತ್ ಎಂಬುವವರಿಗೆ ಮೆಣಸಿನ ಪುಡಿ ಎರಚಿ ದರೋಡೆ ನಡೆಸಿದ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದರಿಂದ LPC-03/2025 ರಂತೆ ವಾರೆಂಟ್ ಜಾರಿಯಾಗಿತ್ತು.

🔹 ಪ್ರಕರಣ – 2: ವಿಟ್ಲ ಪೊಲೀಸ್ ಠಾಣಾ ಅ.ಕ್ರ. 16/2016, ಕಲಂ 457, 380 IPC. 23-01-2016 ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್‌ನ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ ಪ್ರಕರಣ. ಈ ಪ್ರಕರಣದಲ್ಲಿಯೂ ಆರೋಪಿ ತಲೆಮರೆಸಿಕೊಂಡಿದ್ದರಿಂದ ಮಾನ್ಯ ನ್ಯಾಯಾಲಯವು ಕಲಂ 82 ಹಾಗೂ 83ರ ಪ್ರಕಾರ ವಾರೆಂಟ್ ಜಾರಿಗೊಳಿಸಿತ್ತು.

ಈ ಎರಡು ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page