August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೈಸೂರು ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರ ಪ್ರತಿಷ್ಠಾಪನಾ ಹಾಗೂ ಅಧಿಕಾರ ಹಸ್ತಾಂತರ

ನಾಳೆ ಅಕ್ಟೋಬರ್ 7ರಂದು ಮಂಗಳವಾರ ಸಂಜೆ 4:30ಕ್ಕೆ ಮೈಸೂರಿನ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ಭವ್ಯ ಸಮಾರಂಭ

ಮೈಸೂರು ಧರ್ಮಕ್ಷೇತ್ರದ ನೂತನ ಬಿಷಪ್ ಆಗಿ ನೇಮಕಗೊಂಡ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೋ ಎಸ್‌.ಜೆ. ರವರ ಪ್ರತಿಷ್ಠಾಪನೆ ಮತ್ತು ಅಧಿಕಾರ ಹಸ್ತಾಂತರ ಸಮಾರಂಭ ನಾಳೆ ಅಕ್ಟೋಬರ್ 7ರಂದು ಮಂಗಳವಾರ ಸಂಜೆ 4:30ಕ್ಕೆ ಮೈಸೂರಿನ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ನಡೆಯಲಿದೆ.

ಈ ಭವ್ಯ ಸಮಾರಂಭಕ್ಕೆ ಬೆಂಗಳೂರು ಮಹಾ ಧರ್ಮಕ್ಷೇತ್ರದ ಅತೀ ಗೌರವಾನ್ವಿತ ಆರ್ಚ್‌ ಬಿಷಪ್ ಡಾ. ಪೀಟರ್ ಮಚಾದೊರವರು ಆಗಮಿಸಲಿದ್ದಾರೆ. ಅಭಿನಂದನಾ ಕಾರ್ಯಕ್ರಮವನ್ನು ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುಂಸಿಯೋ ಅತೀ ಗೌರವಾನ್ವಿತ ಡಾ. ಲಿಯೋ ಪೋಲ್ಡೋ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು.

ಬೆಂಗಳೂರು ಮಹಾ ಧರ್ಮಕ್ಷೇತ್ರದ ನಿವೃತ್ತ ಆರ್ಚ್ ಬಿಷಪ್ ಹಾಗೂ ಪ್ರಸ್ತುತ ಮೈಸೂರು ಧರ್ಮಕ್ಷೇತ್ರದ ಅಪೊಸ್ತೋಲಿಕ್ ಆಡಳಿತಾಧಿಕಾರಿಯಾಗಿರುವ ಅತೀ ವಂದನೀಯ ಡಾ. ಬರ್ನಾರ್ಡ್ ಮೊರಾಸ್ ಈ ಸಂದರ್ಭದಲ್ಲಿ ಉಪಸ್ಥಿತಲಿರುವರು. ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು, ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಸಾವಿರಾರು ಭಕ್ತಾಧಿಗಳು ಈ ಪ್ರತಿಷ್ಠಾಪನಾ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲಿರುವರು.

You may also like

News

ಸಿಬ್ಬಂದಿ ಕೊರತೆ ನೀಗಿಸಲು ಮೆಸ್ಕಾಂಗೆ 395 ಪವರ್‌ಮ್ಯಾನ್‌ಗಳು – ಅಧ್ಯಕ್ಷ ಕೆ. ಹರೀಶ್ ಕುಮಾರ್

ಮಂಗಳೂರು: ವಿದ್ಯುತ್ ಸರಬರಾಜು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.
News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ

You cannot copy content of this page