ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಅಕ್ಟೋಬರ್ 12 ರಂದು ವಾರ್ಷಿಕ ಹಬ್ಬದ ಸಂಭ್ರಮ

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ರವರಿಂದ ಪತ್ರಿಕಾ ಪ್ರಕಟನೆ
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಅಕ್ಟೋಬರ್ 12ರಂದು ಭಾನುವಾರ ವಾರ್ಷಿಕ ಹಬ್ಬವನ್ನು (ಸಾಂತ್ ಮಾರಿ) ಧಾರ್ಮಿಕ ಭಾವನೆ ಮತ್ತು ಉತ್ಸವಮಯ ವಾತಾವರಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ.
ಆ ದಿನ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜರವರು ಬಲಿ ಪೂಜೆಯ ನೇತೃತ್ವ ವಹಿಸಿ ಭಕ್ತರನ್ನು ಆಶೀರ್ವದಿಸಲಿದ್ದಾರೆ. ಪಾಲ್ದಾನೆ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಎಲೋಶಿಯಸ್ ಕುವೆಲ್ಲೊ ಹಾಗೂ ಸಿಟಿ ವಲಯ ವ್ಯಾಪ್ತಿಯ 12 ಚರ್ಚ್‌ಗಳ ಧರ್ಮಗುರುಗಳು ದಿವ್ಯ ಬಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಉತ್ಸವದ ಅಂಗವಾಗಿ ICYM ಸದಸ್ಯರು ‘ನಶೀಬಚೊ ಖೆಳ್’ಎಂಬ ಮನೋರಂಜನಾ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಿದ್ದಾರೆ. ಭಕ್ತರ ಸೌಲಭ್ಯಕ್ಕಾಗಿ ವಿವಿಧ ಸ್ಟಾಲ್‌ಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಅದೇ ದಿನ ಸಂಜೆ ‘ತಾಲೆಂತಾಚೊ ಸಂಭ್ರಮ್’ ಕಾರ್ಯಕ್ರಮದಲ್ಲಿ ಚರ್ಚ್ ಸದಸ್ಯರ ಪ್ರತಿಭೆ ಪ್ರದರ್ಶನ, ಫುಡ್ ಫೆಸ್ಟಿವಲ್ ಹಾಗೂ ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಇಂದು ಅಕ್ಟೋಬರ್ 8ರಂದು ಬುಧವಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.