ಕರ್ನಾಟಕ ರಾಜ್ಯ ಯುವ ಆಯೋಗದ 40ನೇ ವಾರ್ಷಿಕೋತ್ಸವ – ಕ್ರಿಸ್ತ ಜಯಂತಿ ಜುಬಿಲಿ ವರ್ಷದ ಸಂಭ್ರಮದಲ್ಲಿ ಭವ್ಯ ಉದ್ಯೋಗ ಮೇಳ – “Career Expo – 2025”

ಮಂಗಳೂರು ಧರ್ಮಕ್ಷೇತ್ರದ ICYM, ಯುವ ಆಯೋಗ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಸಹಯೋಗದಲ್ಲಿ ಆಯೋಜನೆ
ಕರ್ನಾಟಕ ರಾಜ್ಯ ಯುವ ಆಯೋಗದ 40ನೇ ವಾರ್ಷಿಕೋತ್ಸವ ಮತ್ತು ಕ್ರಿಸ್ತ ಜಯಂತಿ ಜುಬಿಲಿ ವರ್ಷ 2025ರ ಪ್ರಯುಕ್ತ, ಮಂಗಳೂರು ಧರ್ಮಕ್ಷೇತ್ರದ ICYM, ಯುವ ಆಯೋಗ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಾಮಂಜೂರು ಹಾಗೂ ಕರ್ನಾಟಕ ಪ್ರಾದೇಶಿಕ ಯುವ ಆಯೋಗ, ಇವರ ಸಹಯೋಗದಲ್ಲಿ “Career Expo – 2025” ಎಂಬ ಭವ್ಯ ಉದ್ಯೋಗ ಮೇಳವನ್ನು ನವೆಂಬರ್ 1 ಮತ್ತು 2 ರಂದು ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಗೂ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಮುಖ್ಯಸ್ಥರಾದ ಅತೀ ವಂದನೀಯ ಡಾ. ಹೆನ್ರಿ ಡಿಸೋಜ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಕರ್ನಾಟಕ ಪ್ರಾದೇಶಿಕ ಹಾಗೂ ಮಂಗಳೂರು ಧರ್ಮಕ್ಷೇತ್ರದ ಯುವ ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಲೋಹಿತ್ ಕಾರ್ಡೋಜ, ಎಸ್‌ಜೆಇಸಿ ನಿರ್ದೇಶಕರಾದ ವಂದನೀಯ ಫಾದರ್ ವಿಲ್ಘ್ರೆಡ್ ಪ್ರಕಾಶ್, ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಸಂಯೋಜಕಿ ಎಲಿನಾ ಗೊನ್ಸಾಲ್ವಿಸ್, ICYM ಕೇಂದ್ರೀಯ ಅಧ್ಯಕ್ಷ ವಿಜೋಯ್ ಅಶ್ವಿನ್ ಕಾರ್ಡೋಜ ಹಾಗೂ ಯುವ ಸಂಯೋಜಕ ಜೈಸನ್ ಕ್ರಾಸ್ತಾ ಮತ್ತು ಇವರ ತಂಡ ಈ ಕಾರ್ಯಕ್ರಮದ ಪ್ರಮುಖ ಸಂಚಾಲಕರಾಗಿದ್ದಾರೆ.
ಇಂದಿನ ಯುವಜನರು ಉದ್ಯೋಗಾವಕಾಶಗಳ ಕೊರತೆಯಿಂದ ಎದುರಿಸುತ್ತಿರುವ ಸವಾಲುಗಳನ್ನು ಮನಗಂಡು, ಈ ಉದ್ಯೋಗ ಮೇಳವು ಯುವಕರಿಗೆ ಹೊಸ ದಾರಿಯನ್ನು ತೋರಿಸಲಿದೆ. 250ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ 1000ಕ್ಕೂ ಹೆಚ್ಚು ಯುವಕರು ನೋಂದಾಯಿಸಿ ಕೊಂಡಿದ್ದಾರೆ. 50ಕ್ಕೂ ಹೆಚ್ಚು ಸ್ಟಾರ್ಟ್-ಅಪ್ ಸ್ಟಾಲ್‌ಗಳು ಯುವ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಿವೆ.
ಈ ಉದ್ಯೋಗ ಮೇಳವು ಎಲ್ಲಾ ಧರ್ಮಗಳ ಯುವಕರಿಗೂ ಮುಕ್ತವಾಗಿದ್ದು, “Empowering Youth, Bridging Opportunities” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿದೆ ಎಂದು ಇಂದು ಅಕ್ಟೋಬರ್ 18ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ICYM ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜರವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜ, ವಿಲೀನಾ ಗೊನ್ಸಾಲ್ವಿಸ್, ವಿಜಯ್ ಕಾರ್ಡೋಜ, ಜೆಸಿಕಾ ಸಾಂತುಮಾಯೋರ್, ಆ್ಯಶ್ಲಿ ಡಿಸೋಜ, ಮರಿಯಾ ಡಿಸಿಲ್ವ ಮತ್ತು ಬ್ರಿಸ್ಟನ್ ರೊಡ್ರಿಗಸ್ ಉಪಸ್ಥಿತರಿದ್ದರು.