August 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶೀಘ್ರದಲ್ಲೇ ಅಧಿಕೃತ Caller ID ಸೇವೆ ಆರಂಭ – ಸ್ಕ್ಯಾಮ್ ಕರೆಗಳಿಗೆ ಬೀಳಲಿದೆ ಕಡಿವಾಣ

ಇತ್ತೀಚಿನ ದಿನಗಳಲ್ಲಿ ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ ವಂಚಿಸುವ ಘಟನೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಆದರೆ ಇದೀಗ, ಈ ರೀತಿಯ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೂರಸಂಪರ್ಕ ಇಲಾಖೆ (DoT) ಹೊಸ ಯೋಜನೆ ಕೈಗೊಂಡಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಈಗ Calling Name Presentation (CNAP) ಎನ್ನುವ ಹೊಸ ಸೇವೆಗೆ ಹಸಿರು ನಿಶಾನೆ ನೀಡಿದೆ.

CNAP ಎಂದರೇನು ?

CNAP (Calling Name Presentation) ಎಂಬುದು ಹೊಸ ತಂತ್ರಜ್ಞಾನ ಸೇವೆಯಾಗಿದ್ದು, ಸಿಮ್ ಖರೀದಿಯ ಸಮಯದಲ್ಲಿ ನೀಡಿರುವ ಅಧಿಕೃತ ಹೆಸರನ್ನು ಕರೆ ಸ್ವೀಕರಿಸುವವರ ಮೊಬೈಲ್ ಪರದೆಯ ಮೇಲೆ ತೋರಿಸುತ್ತದೆ. ಅಂದರೆ, ನೀವು ಯಾರಿಗಾದರೂ ಕರೆ ಮಾಡಿದರೆ, ನಿಮ್ಮ ನಂಬರ್ ಜೊತೆಗೆ ನಿಮ್ಮ ಹೆಸರು ಕೂಡ ಎದುರಿನ ವ್ಯಕ್ತಿಯ ಪರದೆಯ ಮೇಲೆ ತೋರಿಸಲಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ ?

CNAP ಸೇವೆ 4G ಮತ್ತು 5G ನೆಟ್ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಮ್ ನೋಂದಣಿ ಸಮಯದಲ್ಲಿ ನೀಡಿದ ಹೆಸರು ಮತ್ತು ಸಂಖ್ಯೆಗಳನ್ನು ನೆಟ್ವರ್ಕ್ ಆಪರೇಟರ್‌ಗಳು ಸಂಗ್ರಹಿಸುತ್ತಾರೆ. ಕರೆ ಮಾಡುವಾಗ ಈ ಮಾಹಿತಿಯು ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ. ಇದಕ್ಕಾಗಿ Truecaller ಅಥವಾ ಇತರೆ ಯಾವುದೇ ಥರ್ಡ್-ಪಾರ್ಟಿ ಆ್ಯಪ್ ಅಗತ್ಯವಿಲ್ಲ.

CNAP ಸೇವೆಯ ಪ್ರಯೋಜನಗಳು

✅ ವಂಚನಾ ಕರೆಗಳು ಮತ್ತು ಸ್ಕ್ಯಾಮ್‌ಗಳ ವಿರುದ್ಧ ರಕ್ಷಣೆ

✅ ಕರೆ ಸ್ವೀಕರಿಸುವ ಮುನ್ನ ಯಾರು ಕರೆ ಮಾಡುತ್ತಿದ್ದಾರೆ ಎಂಬ ಸ್ಪಷ್ಟತೆ

✅ ಗೌಪ್ಯತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಳ

TRAI ಹೇಳಿಕೆ

TRAI ಪ್ರಕಾರ, ಈ ಸೇವೆಯನ್ನು ಭಾರತದಲ್ಲಿನ ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಪೂರ್ವ ನಿಯೋಜಿತವಾಗಿ (default) ಸಕ್ರಿಯಗೊಳಿಸಲಾಗುವುದು. ಈ ಸೇವೆ ಆರಂಭವಾದ ಬಳಿಕ, ವಂಚನೆ ಕರೆಗಳು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ಶೀಘ್ರದಲ್ಲೇ ಭಾರತದಲ್ಲಿ ಆಧಿಕೃತ Caller ID ವ್ಯವಸ್ಥೆ (CNAP) ಜಾರಿಗೆ ಬರಲಿದೆ. ಇದರಿಂದ ಫೋನ್ ಕರೆಗಳಲ್ಲಿ ನಿಜವಾದ ಹೆಸರು ತೋರಿಸಲಾಗುತ್ತದೆ — ಈ ಮೂಲಕ ದೇಶದಾದ್ಯಂತ ನಡೆಯುತ್ತಿರುವ ವಂಚನೆ ಕರೆಗಳಿಗೆ ಪರಿಣಾಮಕಾರಿ ಕಡಿವಾಣ ಬೀಳಲಿದೆ.

You may also like

News

ನೇಪಾಳದ ದುಃಖದಲ್ಲಿ ಮಂಗಳೂರು ಧರ್ಮಕ್ಷೇತ್ರವೂ ಭಾಗಿ – ವಿಶೇಷ ಪ್ರಾರ್ಥನೆಗೆ ಬಿಷಪ್ ಸಲ್ಡಾನ್ಹಾ ಕರೆ

ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಫಾದರ್ ರೂಪೇಶ್ ಮಾಡ್ತಾ ಹಾಗೂ ರೋಯ್ ಕ್ಯಾಸ್ತೆಲಿನೊ ಜಂಟಿ ಪತ್ರಿಕಾ ಪ್ರಕಟನೆ ಮಂಗಳೂರು: ನೇಪಾಳದ ವಿವಿಧ ಭಾಗಗಳಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ
News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.

You cannot copy content of this page