August 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೈಬರ್ ವಂಚನೆ ಜಾಲ ಬಯಲು – ಇಬ್ಬರು ಆರೋಪಿತರ ಬಂಧನ

ಸೈಬರ್ ವಂಚನೆಗೆ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಮತ್ತು 250 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳ ಬಳಕೆ

ಮಂಗಳೂರು ನಗರ ಸೈಬರ್ ಕ್ರೈಂ (CEN) ಪೊಲೀಸ್‍ರು ದೊಡ್ಡ ಮಟ್ಟದ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿ, 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಮತ್ತು 250ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ವಂಚನೆ ನಡೆಸುತ್ತಿದ್ದ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ 45/2024 ರ ಅಡಿ ಐಟಿ ಆಕ್ಟ್ 66(D) ಮತ್ತು ಐಪಿಸಿ ಕಲಂ 420 ರಂತೆ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಕಸ್ಟಮ್ಸ್ ಇಲಾಖೆಯ ಹೆಸರಿನಲ್ಲಿ ಮೋಸಮಾಡಿ ರೂಪಾಯಿ 7,27,000 ಹಣ ಹಂತ ಹಂತವಾಗಿ ಕಸಿದುಕೊಂಡಿರುವ ಬಗ್ಗೆ ದೂರು ಬಂದಿತ್ತು.

ಬಂಧಿತ ಆರೋಪಿತರ ವಿವರ

ತ್ರಿಪುರದ ಢಲೈಯ 27 ವರ್ಷ ಪ್ರಾಯದ ಡೇಮನ್‌ಜಾಯ್ ರಿಯಾಂಗ್ ಹಾಗೂ ಮಣಿಪುರದ ಕಂಗ್ಪೋಕ್ಪಿ ಜಿಲ್ಲೆಯ 33 ವರ್ಷ ಪ್ರಾಯದ ಹೆಮಂಗ್‌ಟೆ ರೆಯಿಲ್ ಕೊಂ @ ಮ್ಯಾಂಗ್ಟೆ ಆಮೋಶ್ ಬಂಧಿತ ಆರೋಪಿಗಳು.

ತನಿಖೆಯ ಹಂತದಲ್ಲಿ ಹಣ ವರ್ಗಾವಣೆ ನಡೆದ ಬ್ಯಾಂಕ್ ಖಾತೆಗಳ ಹಾದಿ ತಟ್ಟಿದ ಪೊಲೀಸರು ಮೊದಲ ಆರೋಪಿಯಾದ ಡೇಮನ್‌ಜಾಯ್ ರಿಯಾಂಗ್ ಅನ್ನು ದಿನಾಂಕ 13-11-2025 ರಂದು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮುಂದಿನ ಸುಳಿವಿನ ಆಧಾರದಲ್ಲಿ ಹೆಮಂಗ್‌ಟೆ ರೆಯಿಲ್ ಕೊಂ @ ಮ್ಯಾಂಗ್ಟೆ ಆಮೋಶ್ ಎಂಬಾತನನ್ನು ದಿನಾಂಕ 15-11-2025 ರಂದು ಬಂಧಿಸಿ ದಿನಾಂಕ 16-11-2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವನಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಶಾಲ ಸೈಬರ್ ವಂಚನೆ ತಂತ್ರ ಬಯಲು:

ಮ್ಯಾಂಗ್ಟೆ ಆಮೋಶ್ ವ್ಯಕ್ತಿ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಮತ್ತು 250 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚನೆಗೆ ಬಳಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಬಂಧಿತರ ವಶದಿಂದ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ:

08 ಮೊಬೈಲ್ ಫೋನುಗಳು, 20 ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳು, 18 ಬ್ಯಾಂಕ್ ಪಾಸ್‌ಬುಕ್‌ಗಳು, 11 ಚೆಕ್‌ಬುಕ್‌ಗಳು, 07 ಸಿಮ್ ಕಾರ್ಡ್‌ಗಳು.

ಪೊಲೀಸರ ಕಾರ್ಯ ಪ್ರಶಂಸನೀಯ:

ಈ ಪ್ರಕರಣದ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ CEN ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಹತ್ವದ ಪಾತ್ರವಹಿಸಿದ್ದಾರೆ.

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page