September 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ – ಮೂವರು ವಶಕ್ಕೆ

ನವೆಂಬರ್ 30ರಂದು ಭಾನುವಾರ ಸಂಜೆ ಬಂಟ್ವಾಳ ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ, ಅಕ್ರಮವಾಗಿ ಕೋಳಿ ಅಂಕದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಬಿ.ಎಸ್. ನಾಯಕ್ ರವರು ಸಿಬ್ಬಂದಿಗಳೊಂದಿಗೆ, ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದು ಈ ವೇಳೆ ಸಾರ್ವಜನಿಕ ಗುಡ್ಡೆಯ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ಆಡುತ್ತಿದ್ದುದು ಕಂಡು ಬಂದಿದೆ. ಅವರುಗಳ ಪೈಕಿ ಬಂಟ್ವಾಳ ತಾಲೂಕಿನ ಇಡಿದು ಗ್ರಾಮದ ನಿವಾಸಿ 38 ವರ್ಷ ಪ್ರಾಯದ ಉಮೇಶ, ಅನಂತಾಡಿ ಗ್ರಾಮದ ನಿವಾಸಿ 38 ವರ್ಷ ಪ್ರಾಯದ ಅಣು ಹಾಗೂ ವೀರಕಂಭ ಗ್ರಾಮದ ನಿವಾಸಿ 30 ವರ್ಷ ಪ್ರಾಯದ ಉಮೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದವರು ಪರಾರಿಯಾಗಿರುತ್ತಾರೆ.

ಆರೋಪಿಗಳ ತಪಾಸಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ ರೂಪಾಯಿ 2,100/-ನಗದು ಪತ್ತೆಯಾಗಿದ್ದು, ಸ್ಥಳದಲ್ಲಿ ಕೋಳಿ ಅಂಕಕ್ಕೆ ಬಳಸಿದ 5 ಕೋಳಿಗಳು, ಕೋಳಿ ಅಂಕಕ್ಕೆ ಬಳಸಿದ ಕತ್ತಿ ಹಾಗೂ ದಾರಗಳು ಪತ್ತೆಯಾಗಿರುತ್ತದೆ. ಸದ್ರಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 177/2025 ಕಲಂ: 87,93. K.P.Act ಮತ್ತು ಕಲಂ: 3,11. PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಿಸಲಾಗಿದೆ.

You may also like

News

BPL ಕುಟುಂಬಗಳಿಗೆ ಉಚಿತ ರಕ್ತ: ಮುಂದಿನ ವರ್ಷದಿಂದ ಯೋಜನೆ ಜಾರಿ – ಸಿಎ ಶಾಂತಾರಾಮ ಶೆಟ್ಟಿ

ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ BPL ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತ ಪೂರೈಸುವ ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ
News

Free Speech and Hearing Camp inaugurated at Father Muller

A Free Speech and Hearing Camp, organized by Father Muller Medical College Hospital on the occasion of International Hearing-Impaired Week,

You cannot copy content of this page