September 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫಾದರ್ ಅನಿಲ್ ಡಿಕೋಸ್ಟಾ ಅವರಿಗೆ Phd ಪದವಿ ಪ್ರಧಾನ

ಉಡುಪಿ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್‌ನಲ್ಲಿ 9 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ಸೈಂಟ್ ಆ್ಯಂಟನಿ ಗ್ಲೋಬಲ್ ಅಕಾಡೆಮಿಯ ನಿಯೋಜಿತ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಕಾಪುಚಿನ್ ಮೇಳದ ವಂದನೀಯ ಫಾದರ್ ಅನಿಲ್ ಡಿಕೋಸ್ಟಾ ಅವರಿಗೆ Phd ಪದವಿ ಪ್ರಧಾನವಾಗಿದೆ. “Educational and Socio-Cultural Accomplishment: Leader Motives and Congregational Culture of the Franciscan Capuchins — A Historical Perspective” ಎಂಬ ಮಹಾಪ್ರಬಂಧಕ್ಕಾಗಿ ಡಿಸೆಂಬರ್ 4ರಂದು ಗುರುವಾರ ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿ Phd ಪದವಿ ಪ್ರದಾನ ಮಾಡಿತು.

ಡಾ. ವಂದನೀಯ ಫಾದರ್ ಅನಿಲ್ ಡಿಕೋಸ್ಟಾ ಅವರು ಮೂಲತಃ ಮಂಗಳೂರಿನ ಕೆಲರಾಯ್ ಪ್ರದೇಶದವರು. ಕಳೆದ 17 ವರ್ಷಗಳಿಂದ ಕರ್ನಾಟಕ ಪ್ರೊವಿನ್ಸ್ ಕಪುಚಿನ್ ಮೇಳದ ಧಾರ್ಮಿಕ ಗುರುಗಳಾಗಿ ಸಮಾಜ ಸೇವೆ ಮತ್ತು ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರಳತೆ, ಗಂಭೀರತೆ ಮತ್ತು ದೃಢನಿಷ್ಠೆಯ ಸಮನ್ವಯದಿಂದ ಅವರು ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಪರಿಣಾಮಕಾರಿ ಆಡಳಿತ ಮತ್ತು ಮಾರ್ಗದರ್ಶನ ಒದಗಿಸಿದ್ದಾರೆ.

ಫಾದರ್ ಅನಿಲ್ ಡಿಕೋಸ್ಟಾ ಮಿಂಚುವ ಅಧ್ಯಾಪಕ – ಪ್ರೇರೇಪಕ ಸಂಶೋಧಕ:

ವಂದನೀಯ ಫಾದರ್ ಅನಿಲ್ ಡಿಕೋಸ್ಟಾ ಅವರು ಕೇವಲ ಆಡಳಿತಗಾರರಲ್ಲ, ಅಸಾಧಾರಣ ಶಿಕ್ಷಣ ತಜ್ಞರೂ ಹೌದು. ಅವರ ಬೋಧನಾ ಶೈಲಿಯು ವಿದ್ಯಾರ್ಥಿಗಳಲ್ಲಿ ಚಿಂತನೆ, ಸೃಜನಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವಲ್ಲಿ ವಿಶಿಷ್ಟವಾಗಿದೆ. ಪಾಠಗಳನ್ನು ಮೌಖಿಕ ತೆರೆಗೆ ಸೀಮಿತಗೊಳಿಸದೆ, ನೈಜ ಅನುಭವಗಳು, ನವೀನ ವಿಧಾನಗಳು ಮತ್ತು ಚರ್ಚಾ ಆಧಾರಿತ ಅಧ್ಯಯನ ಮೂಲಕ ಅವರು ಕಲಿಕೆಯ ವಾತಾವರಣವನ್ನು ಜೀವಂತಗೊಳಿಸುತ್ತಾರೆ. ಸಂಶೋಧನೆಯಲ್ಲಿ ಅವರು ತೋರಿಸುವ ಗಂಭೀರ ಪರಿಶ್ರಮ, ಆಳವಾದ ವಿಶ್ಲೇಷಣೆ ಮತ್ತು ಮೂಲಭೂತ ಪ್ರಶ್ನೆಗಳನ್ನು ಪರಿಹರಿಸುವ ಸಾಮರ್ಥ್ಯವು ಶಿಕ್ಷಣ ಕ್ಷೇತ್ರದ ಹಲವಾರು ಯುವ ಸಂಶೋಧಕರಿಗೆ ಆದರ್ಶವಾಗಿದೆ. ಅವರ ಕೆಲಸ, ನಡವಳಿಕೆ ಮತ್ತು ಶೈಕ್ಷಣಿಕ ಒಗಟುಗಳನ್ನು ಪರಿಹರಿಸುವ ದೃಷ್ಟಿಕೋನವು ಅವರನ್ನು ನಿಜವಾದ ಶ್ರೇಷ್ಠ ಶಿಕ್ಷಕರಾಗಿಯೂ, ದೀಕ್ಷಿತ ಸಂಶೋಧಕರಾಗಿಯೂ ಮಾಡಿದೆ.

You may also like

News

BPL ಕುಟುಂಬಗಳಿಗೆ ಉಚಿತ ರಕ್ತ: ಮುಂದಿನ ವರ್ಷದಿಂದ ಯೋಜನೆ ಜಾರಿ – ಸಿಎ ಶಾಂತಾರಾಮ ಶೆಟ್ಟಿ

ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ BPL ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತ ಪೂರೈಸುವ ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ
News

Free Speech and Hearing Camp inaugurated at Father Muller

A Free Speech and Hearing Camp, organized by Father Muller Medical College Hospital on the occasion of International Hearing-Impaired Week,

You cannot copy content of this page