May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆ ಚುನಾವಣೆ – ಹೊಸ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಕೋರ್ಡೆಲ್ ಘಟಕದ ಡೆನಿಸ್ ಫೆರ್ನಾಂಡಿಸ್ ಆಯ್ಕೆ

ಮಂಗಳೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಚುನಾವಣೆಯು ಜನವರಿ 3ರಂದು ಭಾನುವಾರ ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಸೈಂಟ್ ಆ್ಯನ್ಸ್ ಫ್ರಾಯರಿಯಲ್ಲಿ ನಡೆಯಿತು.

ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಭಾರತದ ರಾಷ್ಟ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಮನೋಹರ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಬ್ರದರ್ ಒಲಿವರ್ ಫೆರ್ನಾಂಡೋ ಅವರು ಚುನಾವಣೆಯನ್ನು ನಡೆಸಿಕೊಟ್ಟರು. ಕರ್ನಾಟಕ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಪ್ರಕಾಶ್ ಲೋಬೊ ಅವರು ಸಲಹೆ ಸೂಚನೆಗಳನ್ನು ನೀಡಿ ಸಹಕಾರ ನೀಡಿದರು.

ಚುನಾವಣೆಯಲ್ಲಿ ಮಂಗಳೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಮುಂದಿನ ಅವಧಿಗೆ ಪದಾಧಿಕಾರಿಗಳಾಗಿ ಕೋರ್ಡೆಲ್ ಘಟಕದ ಬ್ರದರ್ ಡೆನಿಸ್ ಫೆರ್ನಾಂಡಿಸ್ ಅಧ್ಯಕ್ಷರಾಗಿ, ಪಾಲ್ದನೆ ಘಟಕದ ಬ್ರದರ್ ಸ್ವೀಬರ್ಟ್ ಎಸ್. ಡಿಸೋಜ ಉಪಾಧ್ಯಕ್ಷರಾಗಿ, ದೇರೆಬೈಲ್ ಘಟಕದ ಸಿಸ್ಟರ್ ಸಬಿಟಾ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ, ಬೋಂದೆಲ್ ಘಟಕದ ಸಿಸ್ಟರ್ ಸಿಸಿಲಿಯಾ ಡಿಕುನ್ಹಾ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಇದಲ್ಲದೆ, ಕುಲಶೇಖರ ಘಟಕದ ಬ್ರದರ್ ಆಲ್ವಿನ್ ಮೊಂತೇರೊ ತರಬೇತಿ ಶಿಕ್ಷಕರಾಗಿ, ಪ್ರತಿನಿಧಿಗಳಾಗಿ ಬ್ರದರ್ ಫ್ರಾನ್ಸಿಸ್ ಲೋಬೊ ಹಾಗೂ ಸಿಸ್ಟರ್ ರೇಷ್ಮಾ ಕುವೆಲ್ಲೊ ಅವರು ಆಯ್ಕೆಯಾಗಿದ್ದಾರೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page