August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ

ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮವು  ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ತುಳುಕೂಟ ಥೈಲ್ಯಾಂಡ್ ಅಧ್ಯಕ್ಷರಾದ ವಿನಯ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಶಕ್ತಿ ಮಹಿಳೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭವಾಯಿತು. ಅಂಗನವಾಡಿ ಶಿಕ್ಷಕಿ ಸುರೇಖಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ನಾರಾಯಣ ಚೌಟ, ರಾಜಾರಾಮ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಕಲಾ ಚೇತನ್, ಕಲಾಸಾಮ್ರಾಟ್ ಬಿರುದಾಂಕಿತ ಚಲನಚಿತ್ರ ನಟ, ಚೇತನ ರೈ ಹಾಗೂ ಪ್ರಶಾಂತಿ ರೈ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಚೇತನ ರೈ ಅವರು ಕಾರ್ಯಕ್ರಮದ ಹಿನ್ನೆಲೆ ಹಾಗೂ ಉದ್ದೇಶವನ್ನು ವಿವರಿಸಿದರು.

ತುಳುಕೂಟ ಥೈಲ್ಯಾಂಡ್ ಅಧ್ಯಕ್ಷರಾದ ವಿನಯ್ ರೈ ಅವರು ಮಾತನಾಡಿ, ತುಳುಕೂಟದ ಸಮಾಜಮುಖಿ ಕಾರ್ಯಯೋಜನೆಗಳು, ವಿದ್ಯಾದಾನ ಮತ್ತು ಅನ್ನದಾನದ ಮಹತ್ವವನ್ನು ವಿವರಿಸಿ, ಶಿಕ್ಷಣ ಹಾಗೂ ಅನ್ನಸೇವೆ ಸಮಾಜದ ಬಲವಾದ ಅಡಿಪಾಯಗಳೆಂದು ಹೇಳಿದರು. ತುಳುಕೂಟದ ಸದಸ್ಯ ಮೈಕಲ್ ವೇಗಸ್ ಅವರು ಅಂಗನವಾಡಿ ಕೇಂದ್ರವನ್ನು ದತ್ತು ಪಡೆದ ಹಿನ್ನೆಲೆ ಹಾಗೂ ನಡೆದ ಪುನರ್‌ನವೀಕರಣ ಕಾರ್ಯಗಳ ವಿವರವನ್ನು ನೀಡಿದರು.

ಈ ಸಂದರ್ಭದಲ್ಲಿ ಆಟದ ಸಾಮಗ್ರಿಗಳನ್ನು ದಾನ ಮಾಡಿದ ರವಿ ಪೂಂಜ (ನಮನಾ ಸ್ಟೋರ್ಸ್, ತುಮಕೂರು) ಹಾಗೂ ಪೇಂಟಿಂಗ್ ಕಾರ್ಯ ನೆರವೇರಿಸಿದ ರಾಮಚರಣ್ ರೈ (ಸರ್ಫಾ ಕೋಟ್ಸ್, ಬೆಂಗಳೂರು) ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು. ಆರ್ಥಿಕ ಹಾಗೂ ನೈತಿಕ ಸಹಕಾರ ನೀಡಿದ ತುಳುಕೂಟದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ತಿಳಿಸಲಾಯಿತು.

ವಿನಯ್ ರೈ, ವಿನ್ಸೆಂಟ್ ಪಿಂಟೋ ಹಾಗೂ ಚಲನಚಿತ್ರ ನಟ ಚೇತನ ರೈ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಾರ್ಥ ಕಾಣಿಕೆಗಳನ್ನು ನೀಡಲಾಯಿತು. ತುಳುಕೂಟದ ಸದಸ್ಯರಾದ ಸತೀಶ್ ಶೆಟ್ಟಿ, ಮೈಕಲ್ ವೇಗಸ್, ವಿನ್ಸೆಂಟ್ ಪಿಂಟೋ, ಶಬರಿ ರೈ, ಲವಿನಾ ಡಿಸಿಲ್ವಾ ಹಾಗೂ ಸುಪ್ರಭಾ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಅಂಗನವಾಡಿ ಶಿಕ್ಷಕಿ ಸುರೇಖಾ ಅವರು ತುಳುಕೂಟದ ಸದಸ್ಯರಿಗೆ ಸಸಿಗಳನ್ನು ನೀಡಿ ಗೌರವ ಸಲ್ಲಿಸಿದರು. ಹಳೆ ವಿದ್ಯಾರ್ಥಿ ಹಾಗೂ ಪೋಷಕರಾದ ಹರೀಶ್ ಅವರು ವಂದನಾರ್ಪಣೆ ಸಲ್ಲಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಇದೇ ಸಂದರ್ಭದಲ್ಲಿ ತುಳುಕೂಟ ಥೈಲ್ಯಾಂಡ್ ಸದಸ್ಯರು ಕೊಣಾಜೆಯ ಸೇವಾಶ್ರಮದಲ್ಲಿ ಅನ್ನದಾನ ಸೇವೆಗೆ ಸಹಕಾರ ನೀಡಿದರು. ಸುಮಾರು 60ಕ್ಕೂ ಹೆಚ್ಚು ವೃದ್ಧರು ವಾಸಿಸುವ ಸೇವಾಶ್ರಮಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಅವಧಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ದಾನ ಮಾಡಲಾಯಿತು. ಈ ಸೇವಾ ಕಾರ್ಯಕ್ಕೆ ಸ್ಥಳೀಯರು ಹಾಗೂ ಸೇವಾಶ್ರಮದ ನಿವಾಸಿಗಳು ತುಳುಕೂಟ ಥೈಲ್ಯಾಂಡ್ ಸಮಿತಿಯ ಸಮಾಜಮುಖಿ ಸೇವಾ ಮನೋಭಾವವನ್ನು ಮನಃಪೂರ್ವಕವಾಗಿ ಶ್ಲಾಘಿಸಿದರು.

ಈ ಎಲ್ಲಾ ಕಾರ್ಯಕ್ರಮಗಳು ಸಮುದಾಯದ ಒಗ್ಗಟ್ಟು, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಶ್ರೇಷ್ಠ ಮಾದರಿಯಾಗಿ ಗುರುತಿಸಲ್ಪಟ್ಟವು.

You may also like

News

“ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ – ಸಮಿತಿ ರಚನೆಗೆ ಸಿಜೆ ಭರವಸೆ”

ಬೆಂಗಳೂರು: ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು
News

CODP ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕತ್ವಕ್ಕೆ ತರಬೇತಿ

ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ನಾಯಕತ್ವವನ್ನು ಬಲಪಡಿಸುವ ಉದ್ದೇಶದಿಂದ ಸಿಓಡಿಪಿ ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಯೋಜನೆಯಡಿ “ಸ್ಥಳೀಯ ಆಡಳಿತದಲ್ಲಿ ನಾಯಕತ್ವ”

You cannot copy content of this page