July 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

₹82 ಕೋಟಿ ಮೌಲ್ಯದ ಮಾದಕ ವಸ್ತು ಬೆಂಕಿಗಾಹುತಿ ಮಾಡಿದ ಮಂಗಳೂರು ಪೊಲೀಸರು!

ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದತ್ತ ದೃಢ ಹೆಜ್ಜೆಯಿಟ್ಟಿರುವ ಮಂಗಳೂರು ನಗರ ಪೊಲೀಸರು, ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು ₹82 ಕೋಟಿ ಮೌಲ್ಯದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಇಂದು ಜುಲಾಯಿ 29ರಂದು ಬುಧವಾರ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟು ನಾಶಪಡಿಸಿದ್ದಾರೆ.

ಮಂಗಳೂರು ನಗರದ ಮುಲ್ಕಿ ಸಮೀಪದ ಕೊಳ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ ‘ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್‌ಮೆಂಟ್ ಲಿಮಿಟೆಡ್’ (Re Sustainability) ಘಟಕದಲ್ಲಿ ‘ಡ್ರಗ್ ಡಿಸ್ಪೋಸಲ್ ಕಮಿಟಿ’ಯ ಸಮ್ಮುಖದಲ್ಲಿ ಈ ಬೃಹತ್ ವಿಲೇವಾರಿ ಪ್ರಕ್ರಿಯೆ ನೆರವೇರಿತು.

59 ಪ್ರಕರಣಗಳು, 16 ಪೊಲೀಸ್ ಠಾಣೆಗಳ ಜಪ್ತಿ ಸ್ವತ್ತು!:

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 59 ಎನ್.ಡಿ.ಪಿ.ಎಸ್ (NDPS) ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ.

ನಾಶಪಡಿಸಲಾದ ಮಾದಕ ವಸ್ತುಗಳ ವಿವರ:

* MDMA: 43 ಕೆ.ಜಿ 260 ಗ್ರಾಂ

* ಗಾಂಜಾ: 450 ಕೆ.ಜಿ

* ಹೈಡ್ರೋ ವೀಡ್ ಗಾಂಜಾ: 880 ಗ್ರಾಂ

* ಭಾಂಗ್: 1 ಕೆ.ಜಿ 200 ಗ್ರಾಂ

* ಚರಸ್: 80 ಗ್ರಾಂ

ಪ್ರಮುಖ ಪ್ರಕರಣಗಳು:

ವಿಲೇವಾರಿ ಮಾಡಿದ ಡ್ರಗ್ಸ್‌ನಲ್ಲಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲೇ ವಶಪಡಿಸಿಕೊಳ್ಳಲಾಗಿದ್ದ ₹75 ಕೋಟಿ ಮೌಲ್ಯದ 37 ಕೆ.ಜಿ. MDMA ಹಾಗೂ 2025ರ ಮುಲ್ಕಿ ಠಾಣೆ ವ್ಯಾಪ್ತಿಯ ₹4.47 ಕೋಟಿ ಮೌಲ್ಯದ 4 ಕೆ.ಜಿ. MDMA ಪ್ರಮುಖವಾಗಿವೆ. ಇದರೊಂದಿಗೆ ಕೊಣಾಜೆ ಮತ್ತು ಮೂಡಬಿದಿರೆ ಠಾಣೆಗಳ ಬೃಹತ್ ಪ್ರಮಾಣದ ಗಾಂಜಾ ಕೂಡ ಒಳಗೊಂಡಿದೆ.

2026ರಲ್ಲಿ ಡ್ರಗ್ಸ್ ವಿರುದ್ಧ ಬಿಗಿ ಕಣ್ಣು:

2026ನೇ ಸಾಲಿನಲ್ಲಿ ಮಂಗಳೂರು ಪೊಲೀಸರು ಮಾದಕ ವಸ್ತುಗಳ ವಿರುದ್ಧ ನಿರಂತರ ಸಮರ ಸಾರಿದ್ದು, ಇದುವರೆಗೆ 87 NDPS ಪ್ರಕರಣಗಳನ್ನು ದಾಖಲಿಸಿ 157 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಈ ವರ್ಷದಲ್ಲೇ ₹8.18 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ 463 ವ್ಯಕ್ತಿಗಳ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಮನವಿ:

ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ಮುಳಚೆಲ್ಲಲು ಸಾರ್ವಜನಿಕರ ಸಹಕಾರ ಅಗತ್ಯ. ಡ್ರಗ್ಸ್ ಮಾರಾಟ ಅಥವಾ ಸೇವನೆಯ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ತಕ್ಷಣವೇ:

* ಪೋಲಿಸ್ ಕಂಟ್ರೋಲ್ ರೂಮ್: 112

* ವಾಟ್ಸಾಪ್/ಮೊಬೈಲ್ ಸಂಖ್ಯೆ: 9480802321

* ಅಥವಾ ಇಲಾಖೆಯ QR ಕೋಡ್ ಬಳಸಿ ರಹಸ್ಯವಾಗಿ ಮಾಹಿತಿ ನೀಡಬಹುದಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

You may also like

News

ಶಾಸಕ ಯಶ್‌ಪಾಲ್ ಸುವರ್ಣ ದ್ವೇಷಪೂರಿತ ಹೇಳಿಕೆಗೆ ಆಕ್ರೋಶ

ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಆಥಿಫ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ
News

ಬಂಟ್ವಾಳ ವೃದ್ಧೆ ಬೆನೆಡಿಕ್ಟ್ ಕಾರ್ಲೋ ಬರ್ಬರ ಕೊಲೆ ಪ್ರಕರಣ – ಆರೈಕೆಗಿದ್ದ ಯುವತಿ ಏಲ್ಮಾ ಬರೆಟ್ಟೊ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

ಇನ್ಸ್ ಪೆಕ್ಟರ್ T.D. ನಾಗರಾಜ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿ ಚಿನ್ನಾಭರಣಕ್ಕಾಗಿ ಆರೈಕೆ ಮಾಡುತ್ತಿದ್ದ ವೃದ್ಧೆಯನ್ನೇ ಉಸಿರುಗಟ್ಟಿಸಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳಿಗೆ ಮಂಗಳೂರಿನ

You cannot copy content of this page