September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ

ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ2026’ ಅನ್ನು ಸೆಪ್ಟೆಂಬರ್ 1ರಂದು ಮಂಗಳವಾರ ಪ್ರಕಟಿಸಿದೆ.

‘ವರ್ಷದ ಅತ್ಯುತ್ತಮ ಲೇಖಕ ಪ್ರಶಸ್ತಿ’ ಯು ಕೊಂಕಣಿ ಸಾಹಿತಿ ಡಾ| ಜೆರಿ ನಿಡ್ಡೋಡಿ ಅವರಿಗೆ ಹಾಗೂ ‘ವರ್ಷದ ಅತ್ಯುತ್ತಮ ಧರ್ಮಕೇಂದ್ರ ಪತ್ರಿಕೆ ಪ್ರಶಸ್ತಿ’ ಯು ‘ಆಂಜೆಲೊರ್‍ಚೊ ಆಂಜ್’ ಪತ್ರಿಕೆಗೆ ದೊರೆತಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 6ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಬಿಜೈ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿರುವರು. ಸಮಾರಂಭದಲ್ಲಿ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಬಿಜೈ ಚರ್ಚ್ ಸಹಯೋಗದೊಂದಿಗೆ ‘ರಾಕ್ಣೊ’ ಪತ್ರಿಕೆಯು ಆಯೋಜಿಸಲಿದೆ.

1938ರಿಂದ ಮಂಗಳೂರು ಧರ್ಮಕ್ಷೇತ್ರದ ಅಧೀನದಲ್ಲಿ ಪ್ರಕಟವಾಗುತ್ತಿರುವ ‘ರಾಕ್ಣೊ’ ವಾರಪತ್ರಿಕೆಯು ತನ್ನ ಸುದೀರ್ಘ ಪಯಣದಲ್ಲಿ ಓದುಗರಿಗೆ ವೈವಿಧ್ಯಮಯ ವಿಚಾರಗಳ ಕುರಿತ ಜ್ಞಾನವರ್ಧಕ ಮಾಹಿತಿಯನ್ನು ನೀಡುತ್ತಾ ಬಂದಿದೆ. ಕಳೆದ ಹಲವು ವರ್ಷಗಳಿಂದ ಪತ್ರಿಕೆಯು ಅತ್ಯುತ್ತಮ ಸಾಹಿತ್ಯ, ಲೇಖನ ಹಾಗೂ ಪತ್ರಿಕೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ‘ರಾಕ್ಣೊ’ ಮಾಜಿ ಸಂಪಾದಕರಾದ ವಂದನೀಯ ಫಾದರ್ ವಲೇರಿಯನ್ ಫೆರ್ನಾಂಡಿಸ್ ಅವರಿಂದ ಕೊಂಕಣಿ ಭಾಷಾ ತರಬೇತಿ ಕಾರ್ಯಕ್ರಮವೂ ನಡೆಯಲಿದೆ.  ‘ರಾಕ್ಣೊ’ ವಾರಪತ್ರಿಕೆಯ ಸಂಪಾದಕರು ಹಾಗೂ ಪ್ರಕಾಶಕರು ಆಗಿರುವ ವಂದನೀಯ ಫಾದರ್ ರೂಪೇಶ್ ಅಶೋಕ್ ಮಾಡ್ತಾ ಅವರು ತಮ್ಮ ಹಾರೈಕೆ ಹಾಗೂ ಸಂಪಾದಕೀಯ ಮಂಡಳಿಯ ಮತ್ತು ತೀರ್ಪುಗಾರರ ಸಮಿತಿಯ ಪರವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like

News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್
News

32 ವರ್ಷಗಳ ಜನಸೇವೆ ಸಾರ್ಥಕ – ಗ್ರೆಟ್ಟಾ ಮಸ್ಕರೇನಸ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಕಂದಾಯ ಇಲಾಖೆಯಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗ್ರಾಮ ಆಡಳಿತಾಧಿಕಾರಿ ಗ್ರೆಟ್ಟಾ ಐರಿನ್ ಮಸ್ಕರೇನಸ್ ಅವರಿಗೆ ತಾಲೂಕು ಆಡಳಿತ ಸೌಧದಲ್ಲಿ ಆತ್ಮೀಯ

You cannot copy content of this page