ಅಪಘಾತದಲ್ಲಿ ಗಾಯಗೊಂಡ ರಮಾನಾಥ ರೈ ಆರೋಗ್ಯ ವಿಚಾರಿಸಿದ ಸಂಸದ ಬ್ರಿಜೇಶ್ ಚೌಟ
ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಮತ್ತು ಅವರ ಆಪ್ತ ಸಹಾಯಕರ ಆರೋಗ್ಯವನ್ನು ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.



ಕಾರ್ಕಳ ತಾಲೂಕಿನ ಸಾಣೂರು ರಾಮಮಂದಿರ ಡಿವೈಡರ್ ಕ್ರಾಸ್ ಬಳಿ ನಿನ್ನೆ ಸೆಪ್ಟೆಂಬರ್ 20ರಂದು ಭಾನುವಾರ ಸಂಭವಿಸಿದ ಅಪಘಾತದಲ್ಲಿ ರಮಾನಾಥ ರೈ, ಕಾರು ಚಾಲಕ ಹಾಗೂ ಆಪ್ತ ಸಹಾಯಕ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.


ಚಿಕಿತ್ಸೆ ಬಳಿಕ ರಮಾನಾಥ ರೈ ಅವರು ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಬೆಂಬಲಿಗರು ಹಾಗೂ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದೇ ವೇಳೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ ರಮಾನಾಥ ರೈ ಹಾಗೂ ಅವರ ಆಪ್ತ ಸಹಾಯಕರ ಆರೋಗ್ಯದ ಬಗ್ಗೆ ವೈದ್ಯರು ಮತ್ತು ಕುಟುಂಬಸ್ಥರಿಂದ ಮಾಹಿತಿ ಪಡೆದರು.



