ಹಂಟರ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಸಕ್ಸಸ್ ಕುಕ್ಕರಬೆಟ್ಟಿಗೆ ಚಾಂಪಿಯನ್ ಪಟ್ಟ
ಇಂಡಿಯನ್ ಪಾಟ್ರಕೋಡಿ ತಂಡಕ್ಕೆ ದ್ವಿತೀಯ ಸ್ಥಾನ – ಹಲವು ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿ

ಬಂಟ್ವಾಳ: ಹರ್ಬನ್ ಹಂಟರ್ಸ್ ಸ್ಪೋರ್ಟ್ಸ್ ಕ್ಲಬ್, ನೆಟ್ಲಮುಡ್ನೂರು ಇದರ ಆಶ್ರಯದಲ್ಲಿ ಕುಕ್ಕರಬೆಟ್ಟು ಸಕ್ಸಸ್ ಕ್ರೀಡಾಂಗಣದಲ್ಲಿ ನಡೆದ ಹಂಟರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸಕ್ಸಸ್ ಕುಕ್ಕರಬೆಟ್ಟು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಅಕ್ಟೋಬರ್ 10 ಮತ್ತು 11ರಂದು ನಡೆದ ಪಂದ್ಯಾಟದಲ್ಲಿ ಇಂಡಿಯನ್ ಪಾಟ್ರಕೋಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.



ಪಂದ್ಯಾವಳಿಯಲ್ಲಿ ಸಕ್ಸಸ್ ಕುಕ್ಕರಬೆಟ್ಟು ತಂಡದ ಮುಹಾಝ್ ಹಾಗೂ ಅಸಿಫ್, ಇಂಡಿಯನ್ ಪಾಟ್ರಕೋಡಿ ತಂಡದ ಖಲಂದರ್, ಟೀಮ್ ಡಿ.ಎಕ್ಸ್ ತಂಡದ ಆಸಿರ್ ಗಡಿಯಾರ ಹಾಗೂ ಸರಫಿಯಾ ಪರ್ಲೋಟ್ಟು ತಂಡದ ರಾಝಿಕ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಉದ್ಯಮಿ ಅಹಮ್ಮದ್ ಹಾಜಿ ಕುಕ್ಕರಬೆಟ್ಟು ಪಂದ್ಯಾಟವನ್ನು ಉದ್ಘಾಟಿಸಿದರು. ಸಲೀಂ ಹಾಜಿ ಕುಕ್ಕರಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಲತೀಫ್ ನೇರಳಕಟ್ಟೆ, ನೇರಳಕಟ್ಟೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಶೀದ್ ಪಲೋಟ್ಟು, ಉದ್ಯಮಿಗಳಾದ ಹಾಜಿ ಸಿರಾಜ್ ಕುಕ್ಕರಬೆಟ್ಟು, ಮನ್ಸೂರ್ ನೇರಳಕಟ್ಟೆ, ಅಲಿ ಪಾಟ್ರಕೋಡಿ, ಉಸ್ಮಾನ್ ಎಂ.ಎಚ್. ಪಾಟ್ರಕೋಡಿ, ಲತೀಫ್ ಪಾಟ್ರಕೋಡಿ, ಅದ್ದು ಪರ್ಲೋಟ್ಟು, ನಿಶಾದ್ ಪಾಟ್ರಕೋಡಿ, ನಿಝಾಮ್ ಪಾಟ್ರಕೋಡಿ, ತಾಜು ಪಾಟ್ರಕೋಡಿ, ಬಶೀರ್ ಪಾಟ್ರಕೋಡಿ, ಹನೀಫ್ ಪಾಟ್ರಕೋಡಿ, ಆಶಿಕ್ ಪಲೋಟ್ಟು, ಸಮದ್ ಪರ್ಲೊಟ್ಟು, ಜುಬೈರ್ ಪರ್ಲೊಟ್ಟು, ಅಶ್ರಫ್ ಭಾರತ್ ಕಾರ್ಸ್, ರಫೀಕ್ ಎಸ್.ಎಸ್. ಕೊಡಾಜೆ, ಇರ್ಫಾನ್ ಸಾಹೇಬ್ ಪಂತಡ್ಕ, ಮೂಸಾ ಕರೀಂ ಮಾಣಿ, ಸಿದ್ದಿಕ್ ಸೂರ್ಯ, ಪ್ರಶಾಂತ್ ಸಂಗಮ್ ಗಣೇಶ್ ನಗರ, ಇಂಜಿನಿಯರ್ ಉಮರ್ ಫಾರೂಕ್ ನೇರಳಕಟ್ಟೆ ಹಾಗೂ ಅಸೀಫ್ ಸೌದಿ ಅರೇಬಿಯಾ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದರು.

ಪಂದ್ಯಾಟದ ನೇತೃತ್ವವನ್ನು ಫೈಝಲ್ ನೇರಳಕಟ್ಟೆ, ರಶೀದ್ ರಚ್ಚಿ ನೇರಳಕಟ್ಟೆ, ಯಾಕೂಬ್ ಪರ್ಲೊಟ್ಟು ಹಾಗೂ ಶಫೀಕ್ ಅಪ್ಪಿ ಪರ್ಲೊಟ್ಟು ವಹಿಸಿದ್ದರು. ಹಾಶಿಮ್ ಕುಕ್ಕರಬೆಟ್ಟು, ಆಶಿಕ್ ಹಾಗೂ ಸಮ್ರಾಝ್ ಚಮ್ಮು ವೀಕ್ಷಕ ವಿವರಣೆ ನೀಡಿದರು. ಶರೀಫ್ ಪರ್ಲೊಟ್ಟು ಕಾರ್ಯಕ್ರಮ ನಿರೂಪಿಸಿದರು.



