October 19, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ಅಕ್ಟೋಬರ್ 21ರವರೆಗೆ ಸೀರೆಗಳ ಹಬ್ಬ – ಸುನಿಲ್ ಸಿಲ್ಕ್ಸ್‌ನಲ್ಲಿ ಶೇಕಡಾ 50ರವರೆಗೆ ರಿಯಾಯಿತಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಕಲ್ಲೇರಿಯ ಉನ್ನತಿ ಕಟ್ಟಡದಲ್ಲಿರುವ ಸುನಿಲ್ ಸಿಲ್ಕ್ಸ್ ಸಾರೀಸ್ ಮಳಿಗೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸೀರೆ ಮೇಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಹಾಗೂ ಉದ್ಯಮಿ ಸುಜಾತ ಆರಿಗ ಚಾಲನೆ ನೀಡಿದರು.

ಅಕ್ಟೋಬರ್ 16ರಿಂದ 21ರವರೆಗೆ ನಡೆಯುವ ಈ ಮೇಳದಲ್ಲಿ ಆಯ್ದ ಸೀರೆಗಳ ಮೇಲೆ ಶೇಕಡಾ 10ರಿಂದ 50ರವರೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ವಿವಿಧ ವಿನ್ಯಾಸಗಳು, ಆಕರ್ಷಕ ಬಣ್ಣಗಳು ಹಾಗೂ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಸೀರೆಗಳ ವಿಶಿಷ್ಟ ಸಂಗ್ರಹ ಗ್ರಾಹಕರಿಗೆ ಲಭ್ಯವಿದೆ.

ಕಲಂಕಾರಿ, ಮಹೇಶ್ವರಿ ಸಿಲ್ಕ್ ಕಾಟನ್, ಇಳಕಲ್, ಧಾರವಾಡ ಕಸೂತಿ, ಮಸರಾಯಿ ಕಾಟನ್, ಸೆಮಿ ಮೈಸೂರು ಸಿಲ್ಕ್ ಕ್ರೇಪ್, ಮಂಗಳಗಿರಿ, ಜಪಾನ್ ಕ್ರೇಪ್, ಡೋಲಾ ಸಿಲ್ಕ್, ಮಲ್‌ಮಲ್ ಸಿಲ್ಕ್, ಜೂಟ್ ಕಾಟನ್, ವಾಯಿಲ್, ಫ್ಯಾನ್ಸಿ ಹಾಗೂ ಯೂನಿಫಾರಂ ಸೀರೆಗಳು ಮೇಳದ ಪ್ರಮುಖ ಆಕರ್ಷಣೆಗಳಾಗಿವೆ. ಇದರೊಂದಿಗೆ ಇಂದಿನ ಫ್ಯಾಷನ್‌ಗೆ ಹೊಂದುವ ಟ್ರೆಂಡಿ ಸೀರೆಗಳೂ ಲಭ್ಯವಿದ್ದು, ಗ್ರಾಹಕರು ತಮ್ಮ ಅಭಿರುಚಿ ಮತ್ತು ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

ಸಾಂಪ್ರದಾಯಿಕ ಸೊಬಗು ಮತ್ತು ಆಧುನಿಕ ವಿನ್ಯಾಸಗಳ ಸಮಾಗಮವಾಗಿರುವ ಈ ಮೇಳವು ಹಬ್ಬ, ಸಮಾರಂಭ ಹಾಗೂ ದೈನಂದಿನ ಬಳಕೆಗೆ ಸೂಕ್ತವಾದ ಸೀರೆಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಲು ಗ್ರಾಹಕರಿಗೆ ಉತ್ತಮ ಅವಕಾಶ ಕಲ್ಪಿಸಿದೆ.

ಈ ಸಂದರ್ಭದಲ್ಲಿ ಮಳಿಗೆಯ ಮಾಲಕಿ ಪವಿತ್ರ ಸುನಿಲ್ ಅವರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

ಮಳಿಗೆಯ ವಿಳಾಸ: ಸುನಿಲ್ ಸಿಲ್ಕ್ಸ್ ಸಾರೀಸ್, ಕೊಠಡಿ ಸಂಖ್ಯೆ 9, ಉನ್ನತಿ ಕಟ್ಟಡ, ಕಲ್ಲೇರಿ, ಧರ್ಮಸ್ಥಳ–574216. ಸಂಪರ್ಕ: 7899856284.

You may also like

News

ಉಪ್ಪಿನಂಗಡಿಯಲ್ಲಿ ಸಾರ್ವಜನಿಕವಾಗಿ ತಲವಾರು ಪ್ರದರ್ಶನ – ಇಬ್ಬರು ಪೊಲೀಸ್ ವಶಕ್ಕೆ

ಉಪ್ಪಿನಂಗಡಿ ಬಾರ್ ಸಮೀಪ ಮಾತಿನ ಚಕಮಕಿ ನಡೆದು ಗಲಾಟೆಯಾದ ವೇಳೆ ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿ ಭೀತಿ ಉಂಟುಮಾಡಿದ ಆರೋಪದಡಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್
News

ಬಂಟ್ವಾಳದಲ್ಲಿ ಸಾಲದ ಹಣದ ವಿವಾದ: ಅಣ್ಣನಿಗೆ ಚಾಕು ಇರಿತ, ತಮ್ಮನ ಮೇಲೆ ಹಲ್ಲೆಗೆ ಯತ್ನ – ಆರೋಪಿ ಅಜಿತ್ ಪೊಲೀಸ್ ವಶಕ್ಕೆ

ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನಿಗೆ ಚಾಕುವಿನಿಂದ ಇರಿದು, ತಮ್ಮನ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ

You cannot copy content of this page