October 21, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ನಾಳೆ ಅಕ್ಟೋಬರ್ 22ರವರೆಗೆ ದಸರಾ ರಜೆ ವಿಸ್ತರಣೆ – ಶಿಕ್ಷಣ ಇಲಾಖೆ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ನೀಡಲಾಗಿದ್ದ ದಸರಾ ರಜೆಯನ್ನು ಅಕ್ಟೋಬರ್ 22, ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 21ರಂದು ದಸರಾ ಹಬ್ಬದ ಅಂಗವಾಗಿ ನಡೆಯುವ ಅಂತಿಮ ದಿನದ ಪೂಜೆ ಹಾಗೂ ಮೆರವಣಿಗೆಗಳು ರಾತ್ರಿ ತಡವಾಗುವವರೆಗೂ ನಡೆಯಲಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದಸರಾ ಹಬ್ಬದ ಆಚರಣೆ ಹಾಗೂ ಮೆರವಣಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸುತ್ತಾರೆ. ಹಬ್ಬದ ನಿಮಿತ್ತ ದೂರದ ಊರುಗಳಿಗೆ ತೆರಳಿರುವವರು ಮರುದಿನವೇ ಬೆಳಿಗ್ಗೆ ಶಾಲೆಗಳಿಗೆ ಹಾಜರಾಗುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಜೆಯನ್ನು ವಿಸ್ತರಿಸುವಂತೆ ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದರು.

ಸಾರ್ವಜನಿಕರ ಮನವಿಯನ್ನು ಪರಿಗಣಿಸಿದ ಜಿಲ್ಲಾಡಳಿತವು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಜೆ ವಿಸ್ತರಣೆಗೆ ಕ್ರಮ ಕೈಗೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸ್ಥಳೀಯ ರಜೆಯಲ್ಲಿ ಒಂದು ದಿನ ಕಡಿತ:

ರಜೆ ವಿಸ್ತರಣೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆ ಸೂಚಿಸಿದೆ. ಶಾಲಾ ಮುಖ್ಯ ಶಿಕ್ಷಕರ ವಿವೇಚನೆಗೆ ನೀಡಲಾಗಿರುವ ನಾಲ್ಕು ಸ್ಥಳೀಯ ರಜೆಗಳ ಪೈಕಿ ಒಂದು ರಜೆಯನ್ನು ಬಳಸಿಕೊಂಡು ಹೆಚ್ಚುವರಿಯಾಗಿ ನೀಡಲಾದ ಒಂದು ದಿನದ ರಜೆಯನ್ನು ಸರಿದೂಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಆಚರಣೆ ಹಾಗೂ ಪ್ರಯಾಣದ ಅನುಕೂಲಕ್ಕಾಗಿ ಮತ್ತೊಂದು ದಿನದ ರಜೆ ಲಭಿಸಿದಂತಾಗಿದೆ.

You may also like

News

ಮದುವೆ ಸಮಾರಂಭದಲ್ಲಿ 3 ವರ್ಷದ ಬಾಲಕಿಯ ಚಿನ್ನದ ಸರ ಕಳವು – 24 ಗಂಟೆಯೊಳಗೆ ಬರ್ಕೆ ಪೊಲೀಸರಿಂದ ಆರೋಪಿ ಬಂಧನ!

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಮೂರೂವರೆ ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬರ್ಕೆ ಠಾಣೆಯ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಪತ್ತೆಹಚ್ಚಿ
News

Father Muller Student Wins International Science Writing Competition

Bringing laurels to Father Muller College of Allied Health Sciences (FMCOAHS), Mangaluru, Renoy Antony Olivera, a second-year BSc Neuroscience Technology

You cannot copy content of this page