November 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಗೆ ಸಾಕಾರ ರೂಪ – ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಹಾಗೂ ಸದ್ಗುಣಗಳ ಬೀಜ ಬಿತ್ತಲು ಧರ್ಮಸ್ಥಳದ ಮೌಲ್ಯಶಿಕ್ಷಣ ಅಭಿಯಾನ

4 ಜಿಲ್ಲೆಗಳ ಶಾಲೆಗಳಿಗೆ 1 ಲಕ್ಷ ‘ಜ್ಞಾನ ಚಂದನ–ಜ್ಞಾನ ನಂದನ’ ಪುಸ್ತಕಗಳ ವಿತರಣೆ – ನವಂಬರ್ 16ರಿಂದ ವಿದ್ಯಾರ್ಥಿ ಸ್ಪರ್ಧೆಗಳಿಗೆ ಚಾಲನೆ

ಧರ್ಮಸ್ಥಳ: ಅಂಕಗಳಿಕೆಯೇ ಶಿಕ್ಷಣದ ಏಕೈಕ ಗುರಿಯಾಗಬಾರದು; ಜ್ಞಾನದ ಜೊತೆಗೆ ಮಾನವೀಯತೆ, ಸಂಸ್ಕಾರ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವ ರೂಪುಗೊಳ್ಳಬೇಕು ಎಂಬ ಆಶಯದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಶೈಕ್ಷಣಿಕ ಅಭಿಯಾನಕ್ಕೆ ಮುಂದಾಗಿದೆ.

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ.), ಶ್ರೀ ಕ್ಷೇತ್ರ ಧರ್ಮಸ್ಥಳವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ 2026ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳು, ಸದ್ಗುಣಗಳು ಹಾಗೂ ಭಾರತೀಯ ಸಂಸ್ಕಾರವನ್ನು ಬೆಳೆಸುವ ಉದ್ದೇಶದಿಂದ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಯೋಜನೆಯಡಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ಒಟ್ಟು ಒಂದು ಲಕ್ಷ ‘ಜ್ಞಾನ ಚಂದನ’ ಮತ್ತು ‘ಜ್ಞಾನ ನಂದನ’ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ವಿತರಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆ, ಸನ್ನಡತೆ, ಮಾನವೀಯ ಸಂಬಂಧಗಳು ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಸಿದ್ಧಪಡಿಸಿ ಶಾಲೆಗಳಿಗೆ ತಲುಪಿಸಲಾಗಿದೆ.

ಪುಸ್ತಕ ಓದಿನೊಂದಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆ:

ಕೇವಲ ಪುಸ್ತಕ ವಿತರಣೆಗಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳು ಓದಿದ ಮೌಲ್ಯಯುತ ವಿಚಾರಗಳನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ ನಾಲ್ಕೂ ಜಿಲ್ಲೆಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದು, ಸೃಜನಶೀಲ ಚಿಂತನೆಗೆ ಅವಕಾಶ ಕಲ್ಪಿಸುವುದು, ನೈತಿಕ ಮೌಲ್ಯಗಳ ಕುರಿತ ಅರಿವನ್ನು ಗಟ್ಟಿಗೊಳಿಸುವುದು ಹಾಗೂ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಸುವುದು ಈ ಸ್ಪರ್ಧೆಗಳ ಪ್ರಮುಖ ಆಶಯವಾಗಿದೆ.

ನವೆಂಬರ್ 16ರಿಂದ ಸ್ಪರ್ಧೆಗಳಿಗೆ ಅಧಿಕೃತ ಚಾಲನೆ:

ಈ ವಿದ್ಯಾರ್ಥಿ ಸ್ನೇಹಿ ಅಭಿಯಾನಕ್ಕೆ ನಾಳೆ ನವೆಂಬರ್ 16ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಬಳಿಕ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನಿಗದಿತ ಸ್ಥಳಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳು ಹಂತ ಹಂತವಾಗಿ ನಡೆಯಲಿವೆ. ಶಿಕ್ಷಣದೊಂದಿಗೆ ಸಂಸ್ಕಾರ, ಜ್ಞಾನದೊಂದಿಗೆ ವಿವೇಕ ಹಾಗೂ ಪ್ರತಿಭೆಯೊಂದಿಗೆ ಮಾನವೀಯತೆಯನ್ನು ಬೆಳೆಸುವ ಈ ಪ್ರಯತ್ನವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.

ಈ ಕುರಿತು ಯೋಜನೆಯ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಮೌಲ್ಯಾಧಾರಿತ ಶಿಕ್ಷಣವೇ ಉತ್ತಮ ಸಮಾಜದ ಭದ್ರ ಬುನಾದಿ ಎಂಬ ಆಶಯದೊಂದಿಗೆ ಧರ್ಮಸ್ಥಳ ಕೈಗೊಂಡಿರುವ ಈ ಅಭಿಯಾನವು ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಯಲ್ಲಿ ಸಂಸ್ಕಾರವಂತ, ಜವಾಬ್ದಾರಿಯುತ ಹಾಗೂ ಮಾನವೀಯ ಮೌಲ್ಯಗಳನ್ನು ಗೌರವಿಸುವ ನಾಗರಿಕರನ್ನು ರೂಪಿಸುವ ಮಹತ್ವದ ಪ್ರಯತ್ನವಾಗಿದೆ.

You may also like

News

ನ್ಯಾಯಾಲಯದ ಯಥಾಸ್ಥಿತಿ ಆದೇಶ ಉಲ್ಲಂಘನೆ ಆರೋಪ – ಕಚ್ಚಿ ಮಸೀದಿ ಅಂಗಡಿಗೆ ಪೊಲೀಸರಿಂದ ಬೀಗ

ನ್ಯಾಯಾಲಯದ ಆದೇಶಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಮಂಗಳೂರಿನ ಬಂದರ್ ಪ್ರದೇಶದಲ್ಲಿರುವ ಪುರಾತನ ಕಚ್ಚಿ ಮಸೀದಿಗೆ ಸೇರಿದ ಬಾಡಿಗೆ ಅಂಗಡಿಯೊಂದರ ವಿಚಾರದಲ್ಲಿ ನ್ಯಾಯಾಲಯದ ಮಧ್ಯಂತರ
News

EM KARNATAKA 2026 – 6th Annual State-Level Conference Held at Father Muller

The Department of Emergency Medicine, Father Muller Medical College (FMMC), Mangaluru, hosted EM Karnataka 2026 – the 6th Annual State-Level

You cannot copy content of this page