November 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಸ್ಮರಣಾರ್ಥ ಮಂಗಳೂರಿನಲ್ಲಿ ನವಂಬರ್ 28ರಂದು ಸ್ಮಾರಕ ಉಪನ್ಯಾಸ

SDM ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಸಹಾಯ ನಿಧಿ ವಿತರಣೆ – ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲ ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಉಪಸ್ಥಿತಿ

ಮಂಗಳೂರು: ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕಾನೂನು ವಲಯದಲ್ಲಿ ಅಪಾರ ಗೌರವ ಮತ್ತು ಮನ್ನಣೆ ಗಳಿಸಿದ್ದ ಹಿರಿಯ ನ್ಯಾಯವಾದಿ ದಿವಂಗತ ಎಂ.ಕೆ. ವಿಜಯ ಕುಮಾರ್ ಅವರ ಸ್ಮರಣಾರ್ಥ ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ನವೆಂಬರ್ 28ರಂದು ಸ್ಮಾರಕ ಉಪನ್ಯಾಸ ಹಾಗೂ ವಿದ್ಯಾರ್ಥಿ ಸಹಾಯ ನಿಧಿ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಶನಿವಾರ ಅಪರಾಹ್ನ 3.30ಕ್ಕೆ ಎಸ್.ಡಿ.ಎಂ. ಕಾನೂನು ಕಾಲೇಜಿನ ಸಭಾಭವನದಲ್ಲಿ ಜರುಗಲಿದೆ.

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರು ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಉದಯ ಹೊಳ್ಳ ಅವರು ಸ್ಮಾರಕ ಉಪನ್ಯಾಸ ನೀಡಲಿದ್ದು, ದಿವಂಗತ ಎಂ.ಕೆ. ವಿಜಯ ಕುಮಾರ್ ಅವರ ಕಾನೂನು ಕ್ಷೇತ್ರದ ಸೇವೆ, ವೃತ್ತಿಪರ ಬದ್ಧತೆ ಹಾಗೂ ನ್ಯಾಯಾಂಗ ವಲಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿರಲಿದೆ.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಜಗದೀಶ್ ಶೆಣವ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸ್ಮಾರಕ ಉಪನ್ಯಾಸದ ಜೊತೆಗೆ ವಿದ್ಯಾರ್ಥಿ ಸಹಾಯ ನಿಧಿ ವಿತರಣೆಯೂ ನಡೆಯಲಿರುವುದು ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಹಿರಿಯ ನ್ಯಾಯವಾದಿಯ ಸ್ಮರಣೆಯನ್ನು ಗೌರವಿಸುವುದರೊಂದಿಗೆ ಕಾನೂನು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ನೆರವು ನೀಡುವ ಆಶಯವನ್ನು ಈ ಕಾರ್ಯಕ್ರಮ ಒಳಗೊಂಡಿದೆ.

ನ್ಯಾಯಾಂಗ ಕ್ಷೇತ್ರದ ಗಣ್ಯರು, ಹಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗುರುವಂದನಾ ಸಮಿತಿಯ ಅಧ್ಯಕ್ಷರಾದ ವಕೀಲ ಬಿ. ಭರತ್‌ರಾಜ್, ಕಾರ್ಯಕ್ರಮದ ಸಂಯೋಜಕರಾದ ಡಾ. ಡಿಂಪಲ್ ಮೇಸ್ತ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

You may also like

News

ಮಾಂಡ್ ಸೊಭಾಣ್‌ನ ಸಾಂಸ್ಕೃತಿಕ ಪಯಣಕ್ಕೆ 300 ತಿಂಗಳ ಸಂಭ್ರಮ

25 ವರ್ಷಗಳ ನಿರಂತರ ಕಲಾಸೇವೆಗೆ ಐತಿಹಾಸಿಕ ಮೈಲಿಗಲ್ಲು –  ಡಿಸೆಂಬರ್ 6ರಂದು ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’ ಮೂಲಕ ಅದ್ಧೂರಿ ಸಂಭ್ರಮಾಚರಣೆ ಮಂಗಳೂರು: ಕೊಂಕಣಿ
News

ದತ್ತು ಕಾರ್ಯದಲ್ಲಿ ದಕ್ಷಿಣ ಕನ್ನಡಕ್ಕೆ ರಾಜ್ಯಮಟ್ಟದ ಗೌರವದ ಗರಿ

ಮಕ್ಕಳ ಕಲ್ಯಾಣ ಸಮಿತಿಗೆ ಪ್ರಥಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೃತೀಯ ಸ್ಥಾನ – ರಶ್ಮಿ ಕೆ.ಎಂ. ನೇತೃತ್ವದ ಕಾರ್ಯವೈಖರಿಗೆ ರಾಜ್ಯಮಟ್ಟದ ಮನ್ನಣೆ ಮಂಗಳೂರು: ಮಕ್ಕಳಿಗೆ ಸುರಕ್ಷಿತ

You cannot copy content of this page